ಕೈಲಾಸಂ / Kailasam

Author: Aa.Na.Kru

Pages: 148

Edition: 2008

Book Size: 1/8th Demmy

Binding: Paper Back

Publisher: Sagar Prakashana

Original price was: ₹85.Current price is: ₹76.

In stock

Description

ಕೈಲಾಸಂ / Kailasam – ಕರ್ನಾಟಕದ ಬರ್ನಾರ್ಡ್ ಷಾ ಎಂದೇ ಖ್ಯಾತಿಯ ಕೈಲಾಸಂ ಜೀವನ, ಪ್ರತಿಭೆ ಹಾಗೂ ಸಾಧನೆಗಳ ಕುರಿತು ಕಾದಂಬರಿಕಾರ ಅ.ನ.ಕೃಷ್ಣರಾಯರು ಬರೆದ ಕೃತಿ-ಕೈಲಾಸಂ. ಲೇಖಕರು ಹೇಳುವಂತೆ ‘ಕೈಲಾಸಂ ವ್ಯಕ್ತಿಯಲ್ಲ; ಶಕ್ತಿ. ವಿಚಾರದಲ್ಲಿ ಅವರು ಸಂಪ್ರದಾಯ ಶರಣರು. ಆಚಾರದಲ್ಲಿ ಕ್ರಾಂತಿಕಾರರು. ನಗೆಗಾರಿಕೆ ಅವರಿಗೆ ಆರಾಮಧಾಮವಲ್ಲ, ಶಕ್ತ್ಯಾಯುಧ, ಕೈಲಾಸಂ ಕೃತಿಯಿಂದ ತಮ್ಮ ವ್ಯಕ್ತಿತ್ವನ್ನು ಮೆರೆಸುವವರಲ್ಲ; ವ್ಯಕ್ತಿತ್ವದಿಂದ ಕೃತಿಯನ್ನು ಮೆರೆಸುವವರು.’ ಎಂದು ಪ್ರಶಂಸಿಸಿದ್ದಾರೆ. ‘ಕೈಲಾಸಂ ನನಗೆ ತುಂಬಾ ಪ್ರಿಯವಾದ ವ್ಯಕ್ತಿ. ಅವರ ಬಗ್ಗೆ ನನಗೆ ವಿಶ್ವಾಸ ಗೌರವ ಇರುವುದರಿಂದಲೇ ನಾನಿಂಥ ಗ್ರಂಥವನ್ನು ಬರೆಯುವ ಗೋಜಿಗೆ ಹೋದದ್ದು’ ಎಂದೂ ಲೇಖಕರು ಈ ಕೃತಿ ರಚನೆಯ ಸ್ಫೂರ್ತಿಯನ್ನು ತಿಳಿಸಿ, ‘ಆದರೂ, ಕೈಲಾಸಂ ಕುರಿತು ಈ ಕೃತಿಯಲ್ಲಿ ಸಮಗ್ರವನ್ನು ಹೇಳಿದಂತಾಗಿಲ್ಲ’ ಎನ್ನುವ ಮೂಲಕ ಕೈಲಾಸಂ ಅವರ ಘನ ವ್ಯಕ್ತಿತ್ವದ ವಿರಾಟ ಸ್ವರೂಪ ನೀಡಿದ್ದಾರೆ.