ಅಮ್ಮನವರ ಇಚ್ಛಾ / Ammanavara Ichha

Author: Beechi

Pages:144

Edition: 2020

Book Size: 1/8th Demmy

Binding: Paper Back

Publisher: Beechi   Prakasahana

Specification

Original price was: ₹125.Current price is: ₹113.

In stock

Description

ಅಮ್ಮನವರ ಇಚ್ಛಾ / Ammanavara Ichha – ಕೆಲವರು ಕಣ್ಣಿನಿಂದ ಮರೆಯಾದೊಡನೆ ಮನಸ್ಸಿನಿಂದಲೂ ಮರೆಯಾಗಿಬಿಡುತ್ತಾರೆ. ಮತ್ತೆ ಕೆಲವರು ಕಣ್ಣಿಗೆ ಮರೆಯಾದರೂ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿಬಿಡುತ್ತಾರೆ. ಅಂಥವರಲ್ಲೊಬ್ಬರು ಬೀchi, ಅವರು ನಮ್ಮಿಂದ ಕಣ್ಮರೆಯಾಗಿ 30 ವರ್ಷಗಳೇ ಸಂದಿದ್ದರೂ ತಮ್ಮ ಹಾಸ್ಯಸಾಹಿತ್ಯ, ನಗೆ ಚಟಾಕಿಗಳ ಮೂಲಕ ಇಂದಿಗೂ ನಮ್ಮ ಮಧ್ಯೆ ನೆಲೆಸಿದ್ದಾರೆ. ಹಾಗೆ ನೋಡಿದರೆ ಹಾಸ್ಯ ಸಾಹಿತ್ಯಕ್ಕೊಂದು ‘ಘನತೆ’ ತಂದುಕೊಟ್ಟವರು ಬೀchi. ಬೀchi ಎಂದರೆ ತಿಂಮ, ತಿಂಮ ಎಂದರೆ ಬೀchi. ತಿಂಮನ ಪ್ರಸಂಗಗಳನ್ನು ಓದಿ ನಗದಿದ್ದವರೇ ಇಲ್ಲ. ಹಾಗೂ ನಗಲಿಲ್ಲವೆಂದರೆ ಅವರನ್ನು ‘ನಗೆ-ಶತ್ರು’ ಎಂದು ಸಾರಾಸಗಟಾಗಿ ವಿಂಗಡಿಸಿಬಿಡಬಹುದು. ಮಾತಿನ ಚುರುಕಿನಲ್ಲಿ ಬೀchiಗೆ ಸರಿಮಾನರಿಲ್ಲ. ಸುಧಾ ವಾರಪತ್ರಿಕೆಯ ‘ನೀವು ಕೇಳಿದಿರಿ?’ ಅಂಕಣದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ರೀತಿ’ ಎಂದೂ ಮರೆಯಲಾಗದ್ದು. ಈ ಅಂಕಣಕ್ಕೋಸ್ಕರವೇ ಅಂದು ಸುಧಾ ಓದುತ್ತಿದ್ದ ವರನೇಕರಿದ್ದರು. ಇಂದಿಗೂ ಹಾಸ್ಯ ಸಾಹಿತ್ಯದಲ್ಲಿ ಅಗ್ರಸ್ಥಾನದಲ್ಲಿರುವವರು ಬೀchiನೇ.