ಕಾವ್ಯ ಸಂವಾದ / Kaavya Samvaada
ಕಾವ್ಯ ಸಂವಾದ / Kaavya Samvaada Original price was: ₹90.Current price is: ₹81.
Back to products
ಸೌಂದರ್ಯ ಸಮೀಕ್ಷೆ / Soundarya Sameekshe
ಸೌಂದರ್ಯ ಸಮೀಕ್ಷೆ / Soundarya Sameekshe Original price was: ₹300.Current price is: ₹270.

ನಿಶ್ಶಬ್ದ – ನನ್ನ ನಿನ್ನ ನಡುವೆ! / Nishabda – Nanna Ninna Naduve!

Author: Sri Yandamoori Veerendranath

Pages: 88

Edition: 2022

Book Size: 1/8th Demmy

Binding: Paper Back

Publisher: Sahithya Prakashana

Original price was: ₹110.Current price is: ₹98.

In stock

Description

ನಿಶ್ಶಬ್ದ – ನನ್ನ ನಿನ್ನ ನಡುವೆ! / Nishabda – Nanna Ninna Naduve! – ನಿಶಬ್ದ ಯಂಡಮೂರಿ ವೀರೇಂದ್ರನಾಥ್‌ ಕಾದಂಬರಿಯಾಗಿದೆ.ಜೀವನ ಆ ಯುವಕನಿಗೆ ಊಟ ಬಡಿಸಿದ ಬಾಳೆ ಎಲೆಯಂತಹದ್ದು. ಆದರೆ ಒಂದು ಕೊರತೆ ಮಾತ್ರವಿತ್ತು. ಹುಡುಗರೂ, ಹುಡುಗಿಯರೂ ಹೇಗೆ ಭೇಟಿಯಾಗುತ್ತಾರೆ. ಏನು ಮಾತಾಡಿಕೊಳ್ಳುತ್ತಾರೆ. ಆಮೇಲಾಮೇಲೆ ಇನ್ನೇನು ಮಾತಾಡಿಕೊಳ್ಳುತ್ತಾರೆಂದು ತಿಳಿದುಕೊಳ್ಳುವ ಬಯಕೆ, ಹಂಬಲ, ತವಕ, ವಿನೋದ ಎಲ್ಲವೂ ಆ ನಿಜವಾದ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆ ಉಂಟಾಗಿ, ಬಹಳ ವಿಧಾನಗಳಲ್ಲಿ ಪ್ರಯತ್ನಿಸಿದ. ಅದು ಕುಸ್ತಿಯ ಪಟ್ಟುಗಳಂತೆ ಅವನನ್ನು ಹಿಡಿದುಕೊಂಡಾಗ ತಾನೊಬ್ಬ ಸೈಕೋ ಆಗಿಬಿಡುವನೇನೋ ಎಂದು ಹೆದರಿದ. ಒಮ್ಮೆ ಪಟ್ಟಣದಿಂದ ಹಳ್ಳಿಗೆ ಪ್ರಯಾಣ ಮಾಡಿದಾಗ, ಅಲ್ಲಿನ ಗೋದಾವರಿ ನದೀ ತೀರ, ತನ್ನ ಸೋದರ ಮಾವ, ಅಲ್ಲಿಯೇ ಒಬ್ಬಳು ಮುದ್ದು ಸುಂದರಿ. ಆ ನಿಶ್ಯಬ್ದದಲ್ಲಿಯೇ, ಆ ಪ್ರಶಾಂತ ವಾತಾವರಣದಲ್ಲಿಯೇ ಎಲ್ಲವೂ ತಿಳಿದುಬಿಟ್ಟಂತೆ ಮನಸ್ಸು ಹಗುರವಾಗಿತ್ತು. ಆನಂದಭೈರವಿ ರಾಗದಂತೆ ಯುವಜನಕ್ಕೆ ಈ ವಿಷಯಗಳನ್ನೆಲ್ಲಾ ಮುಗ್ಧ ಮನೋಹರವಾಗಿ ಬಾಳೆಯ ಹಣ್ಣು ಸುಲಿದಂತೆ ಎಂದು ಯಂಡಮೂರಿ ವೀರೇಂದ್ರನಾಥ್‌ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.