ಇದು ಕತೆಯಲ್ಲ ಜೀವನ / Idu Katheyalla Jeevana
Author: Vasumathi Udupa
Pages: 112
Edition: 2025
Book Size: 1/8th Demmy
Binding: Paper Back
Publisher: Ankita Pustaka
Description
ಇದು ಕತೆಯಲ್ಲ ಜೀವನ / Idu Katheyalla Jeevana – ‘ಇದು ಕತೆಯಲ್ಲ ಜೀವನ’ ವಸುಮತಿ ಉಡುಪ ಅವರ ಕಥಾ ಸಂಕಲನವಾಗಿದ್ದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಬಿಡಿ ಕತೆಗಳನ್ನು ಒಗ್ಗೂಡಿಸಿರುವ ಗುಚ್ಛ ಈ ಕಥಾಸಂಕಲನ. ಇವು ಕಲ್ಪನೆಗಿಂತಾ ವಾಸ್ತವಕ್ಕೆ ಹೆಚ್ಚು ಒತ್ತುಕೊಟ್ಟು ಬರೆದ ಕತೆಗಳು. ಅನುದ್ದೇಶಪೂರ್ವಕವಾಗಿ ಸಂಕಲನದ ಹಲವು ಕತೆಗಳು ಇಳಿವಯಸ್ಸಿನ ತವಕತಲ್ಲಣಗಳನ್ನು ಬಿಂಬಿಸುವ ಕತೆಗಳಾಗಿ ರೂಪುಗೊಂಡಿರುವುದು ವಯೋಮಾನಕ್ಕೆ ತಕ್ಕಂತೆ ಯೋಚನಾಧಾಟಿ ಕೂಡಾ ಬದಲಾಗುವುದನ್ನು ಸಾಂಕೇತಿಕವಾಗಿ ತೋರಿಸುತ್ತದೆ. ಉಳಿದಂತೆ ಹೆಚ್ಚಿನ ಕತೆಗಳು ಜೀವನದ ಹಲವು ಮಗ್ಗುಲುಗಳನ್ನು ಅನಾವರಣಗೊಳಿಸುತ್ತವೆ. ಬದುಕಿನ ಹತ್ತು ಹಲವಾರು ಹಳವಂಡಗಳಲ್ಲಿ, ಬಾಳಿನ ಕುಲುಮೆಯಲ್ಲಿ ಬೆಂದು ನೊಂದರೂ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ, ಜೀವನದ ಕಟು ಸತ್ಯವನ್ನು ಅರಿಯುತ್ತಾ ಮಾನವೀಯ ಮೂರ್ತಿಗಳಾಗಿ ನಿಲ್ಲುವ ಇಲ್ಲಿನ ಹಲವಾರು ಪಾತ್ರಗಳ ಕಥೆ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.
