ಗುಡಿಮಲ್ಲಮ್ / Gudimallam
Author: Dr.K.N. Ganeshaiah
Pages: 136
Edition: 2021
Book Size: 1/8th Demmy
Binding: Paper Back
Publisher: Ankita Pustaka
Specification
Description
ಗುಡಿಮಲ್ಲಮ್ / Gudimallam – ‘ಗುಡಿಮಲ್ಲಮ್’ ಖ್ಯಾತ ಕಥೆಗಾರ ಡಾ.ಕೆ.ಎನ್. ಗಣೇಶಯ್ಯ ಅವರ ಕಥಾ ಸಂಕಲನ. ತಿರುಪತಿಗೆ ಕೇವಲ 30 ಕಿ.ಮೀ. ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೇ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ?. ಮೆಹರ್ಗಂಜ್ ಬಲ್ಗಾಡಿಯ ಅರಮನೆಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ? ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ ಗೆ ಮುಸ್ಲಿಮ್ ರಾಜಕುವರ ಇರಲು ಹೇಗೆ ಸಾಧ್ಯ, ಆತ ಕಟ್ಟಿಸಿದ್ದ ಎನ್ನಲಾದ ಮುಸೋಲಿಯಮ್ ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೇ, ಆತ ಸಾಯುವ ಮುನ್ನವೇ ಏಕೆ ಅದನ್ನು ಕಟ್ಟಲಾಯಿತು? ಇತ್ತೀಚೆಗೆ ಎರಡನೇ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ಧದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ, ಏಕೆ, ಯಾರ ನಡುವೆ ಇದರ ಪರಿಣಾಮಗಳ ಅರಿವು ನಮಗಿದೆಯೇ ಇಂತಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ. ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹವೇ ಈ ಕೃತಿ. ಇಲ್ಲಿ ಗುಡಿಮಲ್ಲಮ್, ಸುಚಾರು ದೇವಿ, ಏಕ್ ಲಾಖಿ ಮುಸೋಲಿಯಮ್, ಯುದ್ಧಬಂಧ ಎಂಬ ನಾಲ್ಕು ಕಥೆಗಳು ಸಂಕಲನಗೊಂಡಿವೆ.
