ಬಹುರೂಪಿ ಗಿರೀಶ್ ಕಾರ್ನಾಡ್ / Bahuroopi Girish Karnad
ಬಹುರೂಪಿ ಗಿರೀಶ್ ಕಾರ್ನಾಡ್ / Bahuroopi Girish Karnad Original price was: ₹250.Current price is: ₹225.
Back to products
ಬೆಂಗಳೂರು / Bengaluru
ಬೆಂಗಳೂರು / Bengaluru Original price was: ₹130.Current price is: ₹117.

ದಂಗೆಯ ದಿನಗಳು / Dangeya Dinagalu

Author: Ravi Belagere

Pages:298

Edition: 2008

Book Size: 1/8th Demmy

Binding: Paper Back

Publisher: Bhavana Prakashana

Original price was: ₹300.Current price is: ₹270.

In stock

Description

ದಂಗೆಯ ದಿನಗಳು / Dangeya Dinagalu  – ಸಿಪಾಯಿ ದಂಗೆ ಭಾರತದಲ್ಲಿ ನಡೆದಂತಹ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಇತಿಹಾಸದಲ್ಲಿ ದಾಖಲಾಗಿರುವಂತಹ ಘಟನೆ. ಈ ಘಟನೆಯ ಕುರಿತು ಮರಾಠಿಯ ಪ್ರಸಿದ್ಧ ಲೇಖಕರಾಗಿರುವಂತಹ ಮನೋಹರ್ ಮಳಗಾಂವ್ಕರ್ ಬರೆದಿರುವಂತಹ ಪುಸ್ತಕದ ಕನ್ನಡಾನುವಾದ ‘ದಂಗೆಯ ದಿನಗಳು’. ನಿವೃತ್ತ ಸೈನ್ಯಾಧೀಕಾರಿಯಾದ ಮನೋಹರ್ ಅವರು ಇತಿಹಾಸದ ಕುರಿತು ಅಪಾರವಾದ ಒಲವು ಉಳ್ಳಂತಹ ವ್ಯಕ್ತಿ. ಸಿಪಾಯಿ ದಂಗೆಯ ಸಮಯದಲ್ಲಿ, ದಂಗೆಯಲ್ಲಿ ಭಾಗವಹಿಸಿದಂತಹ ಸೈನಿಕರ ನಿಸ್ಸಹಾಯಕತೆ, ಕ್ರೌರ್ಯ, ನಿಷ್ಠೆ, ಪ್ರತಿಭಟನೆ, ಮೋಸ, ಸಣ್ಣತನ ಮತ್ತು ಔದಾರ್ಯಗಳ ಕುರಿತು ಈ ಪುಸ್ತಕ ವಿವರಿಸುತ್ತದೆ. ಸಿಪಾಯಿ ದಂಗೆಯ ಕಾರಣಗಳ ಕುರಿತು, ದಂಗೆಯ ಮೊದಲ ಸುಳಿವಿನ ಕುರಿತು, ದಂಗೆ ಏಳಲು ಯಾವ ರೀತಿಯ ಸಿದ್ಧತೆಗಳು ನಡೆದವು ಎಂಬುದರ ಕುರಿತು ಈ ಪುಸ್ತಕ ವಿವರಿಸುತ್ತಾ ಹೋಗುತ್ತದೆ. ಸಿಪಾಯಿ ದಂಗೆ ಸಂಪೂರ್ಣ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿ ಆಗಿಲ್ಲವಾದರೂ, ಬ್ರಿಟೀಷರ ಎದು ನಿಂತು ಬಡಿದಾಡುವ ತಾಕತ್ತು ಭಾರತೀಯರಿಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಂತಹ ಘಟನೆ. ಇಂತಹ ಉತ್ತಮ ಕೃತಿಯ ಕನ್ನಡ ಅನುವಾದವನ್ನು ರವಿ ಬೆಳಗೆರೆಯವರು ಕನ್ನಡಿಗರಿಗೆ ನೀಡಿದ್ದಾರೆ. ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಓದುಗರಿಗೆ ರೋಚಕವಾಗಿರುವ ನಿರೂಪಣೆ ಈ ಪುಸ್ತಕದಲ್ಲಿ ದೊರೆಯಲಿದೆ.