ಸ್ವೈಪ್ ರೈಟ್ / Swipe Right
ಸ್ವೈಪ್ ರೈಟ್ / Swipe Right Original price was: ₹250.Current price is: ₹225.
Back to products
ಕೈಲಾಸಂ ಜೊಕ್ಸೂ ಸಾಂಗ್ಸೂ / Kailasam Jokesoo Songsoo
ಕೈಲಾಸಂ ಜೊಕ್ಸೂ ಸಾಂಗ್ಸೂ / Kailasam Jokesoo Songsoo Original price was: ₹40.Current price is: ₹36.

ದಿ ಪರ್ಫೆಕ್ಟ್ ಮರ್ಡರ್ / The Perfect Murder

Author: Vasudev Murthy

Pages:203

Edition: 2018

Book Size: 1/8th Demmy

Binding: Paper Back

Publisher:  Harivu Books Publication

Specification

Original price was: ₹180.Current price is: ₹162.

In stock

Description

ದಿ ಪರ್ಫೆಕ್ಟ್ ಮರ್ಡರ್ / The Perfect Murder – “ದಿ ಪರ್ಫೆಕ್ಟ್ ಮರ್ಡರ್” (The Perfect Murder) ಎಂಬುದು ವಾಸುದೇವ ಮೂರ್ತಿ (Vasudev Murthy) ಅವರು ಬರೆದ ಕನ್ನಡ ಥ್ರಿಲ್ಲರ್ ಸಣ್ಣ ಕಥೆಗಳ ಸಂಕಲನವಾಗಿದೆ. ಈ ಪುಸ್ತಕವು ಹತ್ತು ವಿಭಿನ್ನ ಕಥೆಗಳನ್ನು ಒಳಗೊಂಡಿದ್ದು, ಕೊಲೆಗಾರನನ್ನು ಕಂಡುಹಿಡಿಯುವುದರ ಬದಲು ಕಥೆಯ ಕುತೂಹಲ ಮತ್ತು ವೇಗಕ್ಕೆ ಒತ್ತು ನೀಡಲಾಗಿದೆ. ಸಣ್ಣ ಕಥೆಗಳ ಪ್ರಾಕಾರವೇ ಹಾಗೆ, ಅಲ್ಪ ಸಮಯದಲ್ಲಿ ಓದುಗರನ್ನು ಉತ್ತುಂಗಕ್ಕೆ ಕರೆದೊಯ್ದು, ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಕೆಲವೇ ಕಥಾಪಾತ್ರಗಳಲ್ಲಿ ಒಂದು ಇಡೀ ಕಥೆಯನ್ನು ಹೇಳಬೇಕು. ಆ ಕಥೆಯ ವಿಸ್ತಾರ, ಪಾತ್ರಗಳು, ಅವುಗಳ ಮುಖಾಂತರ ಹೇಳಬೇಕಾದ ವಿಷಯಗಳು, ಎಲ್ಲವೂ ಒಂದು ಚೌಕಟ್ಟಿನಲ್ಲಿಯೇ ಕೂರಿಸಬೇಕು. ಆ ಕಥೆಗಳು, ಪತ್ತೇದಾರಿ ಕಥೆಗಳಾದರೆ ಕಥೆಯಲ್ಲಿನ ಕುತೂಹಲ ಮತ್ತು ಕಥೆಯ ವೇಗ ಮತ್ತು ಕಥೆಯ ಅಂತ್ಯ ಅತೀ ಮುಖ್ಯ.

ಆದರೆ `ದಿ ಪರ್ಫೆಕ್ಟ್ ಮರ್ಡರ್’ ನಲ್ಲಿ ಬರುವ ಎಲ್ಲಾ ಕಥೆಗಳನ್ನು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಲಾಗಿದೆ. ಇದರ ಉದ್ದೇಶ ಈ ಕಥಾ ಗುಚ್ಚದಲ್ಲಿ ಇರುವ ಎಲ್ಲಾ ಕಥೆಗಳೂ ಕೊಲೆ ಮಾಡಿದ ಅಪರಾಧಿಯನ್ನು ಕಂಡು ಹಿಡಿಯುವುದು ಎನ್ನುವ ಸೂತ್ರಕ್ಕೆ ಬಂಧಿಸಿಕೊಂಡಿಲ್ಲ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹಮದ, ಮಾತ್ಸರ್ಯ ಎಂಬ ಭಾವನೆಗಳೂ ಬೆರೆತುಕೊಂಡಿವೆ.