ಪುಟ್ಟನ ಹೆಜ್ಜೆ ಕಾಣೋದಿಲ್ಲಾ / Puttana Hejje Kaanodilla
Author: Yashwant Chittala
Pages: 132
Edition: 2012
Book Size: 1/8th Demmy
Binding: Paper Back
Publisher: Prisam Book Pvt.Ltd
Description
ಪುಟ್ಟನ ಹೆಜ್ಜೆ ಕಾಣೋದಿಲ್ಲಾ / Puttana Hejje Kaanodilla – ಯಶವಂತ ಚಿತ್ತಾಲರ ಒಂಬತ್ತನೆಯ ಕಥಾಸಂಕಲನ ‘ಪುಟ್ಟನ ಹೆಜ್ಜೆ ಕಾಣೋದಿಲ್ಲಾ’. ಈ ಸಂಕಲನದಲ್ಲಿ ಏಳು ಕಥೆಗಳಿವೆ. ’ಯಾರ ಕಥೆ ಯಾರು ಹೇಳಿದ್ದು?’, ‘ನಮ್ಮೆಲ್ಲರ ಸುಂದರಿ’, ‘ಈಗ ನನ್ನನ್ನೇ ತೆಗೆದುಕೊ’, ’ಕಾಮಾಕ್ಷಿ ಮಾಡಲೆಳಸಿದ ಅತಿ ದಿಟ್ಟ ಕೆಲಸ’, ‘ಕುಂಟನ್ಮನೆ ಬೀರ’, ‘ಪುಟ್ಟನ ಹೆಜ್ಜೆ ಕಾಣೋದಿಲ್ಲ!’, ‘ತುಸು ತಡೆದು ಪ್ರಯತ್ನಿಸಿರಿ’-ಎಂಬ ಕಥೆಗಳಿವೆ. ಚಿತ್ತಾಲರ ಕತೆಗಳ ಕತೆಗಳಿಗೇ ವಿಶಿಷ್ಟ ಎನ್ನಿಸುವ ಶೀರ್ಷಿಕೆಗಳಲ್ಲಿನ ಕಥೆಗಳ ಹರವು ಮತ್ತು ಬಂಧಗಳು ಕಥಾಪ್ರಪಂಚದಲ್ಲಿ ಈಗಲೂ ನಡೆಸಲು ಸಾಧ್ಯವಾಗದ ಪ್ರಯೋಗಕ್ಕೆ ನಿದರ್ಶನವಾಗಿವೆ. ಜಟಿಲ ಸನ್ನಿವೇಶಗಳು ಹಾಗೂ ಇಡಿಕಿರಿದ ಕಥಾನಕವು ನಿಧಾನವಾಗಿ ಹರಿಯುವ ನದಿಯೊಂದರ ಗಂಭೀರ ನಡೆಯನ್ನು ನೆನಪಿಸುವ ಹಾಗಿದೆ. ಸಂಯಮದ ನಿರೂಪಣೆ ಇಲ್ಲಿನ ಕತೆಗಳ ವಿಶೇಷ. ಸಂಕೀರ್ಣ ವಾಕ್ಯ ಸರಣಿಯು ಪ್ರತಿ ಕಥೆಯಲ್ಲಿಯೂ ಕಾಣಿಸುವ ಮೂಲಕ ‘ಚಿತ್ತಾಲ ಮುದ್ರೆ’ಯಾಗಿದೆ. ಉತ್ತರ ಕನ್ನಡದ ಪ್ರಾದೇಶಿಕ ಲಕ್ಷಣ ಬಿಂಬಿಸುವ ಅವರ ‘ಹನೇಹಳ್ಳಿ’ಯಲ್ಲಿ ಇಲ್ಲಿನ ಕೆಲವು ಕಥೆಗಳಲ್ಲಿ ಘಟನೆಗಳು ನಡೆಯುತ್ತವೆ. ಕೆಲವು ಕತೆಗಳಲ್ಲಿ ಹನೇಹಳ್ಳಿ ಇಲ್ಲವಾದರೂ ಆದರೆ ಅದರ ಛಾಯೆ ಅನುಭವಕ್ಕೆ ಬರದೇ ಇರದು.
