ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು / Bheeshma Helida Management Kathegalu
Author: Jagadeesha Sharma Sampa
Pages:176
Edition: 2024
Book Size: 1/8th Demmy
Binding: Paper Back
Publisher: Sawanna Publication
Specification
Description
ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು / Bheeshma Helida Management Kathegalu – “ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು” (Bheeshma Helida Management Kathegalu) ಎಂಬುದು ಜಗದೀಶ ಶರ್ಮಾ ಸಂಪ (Jagadeesha Sharma Sampa) ಅವರು ಬರೆದ ಕನ್ನಡ ಪುಸ್ತಕ. ಈ ಪುಸ್ತಕವು ಮಹಾಭಾರತದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಭೀಷ್ಮರ ಜೀವನ ಮತ್ತು ಅವರ ಮಾತುಗಳ ಮೂಲಕ ತಿಳಿಯುವಂತಹ ಮ್ಯಾನೇಜ್‌ಮೆಂಟ್ ತತ್ವಗಳು ಹಾಗೂ ಜೀವನ ಪಾಠಗಳ ಕಥಾ ಸಂಕಲನವಾಗಿದೆ.
ಅವನು ಎಂಟು ನೂರು ವರ್ಷಗಳ ಸುದೀರ್ಘ ಕಾಲ ಬದುಕಿದ್ದ. ಆರಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದ್ದ. ಅದಕ್ಕೂ ಹಿಂದೆ ಅವನದ್ದು ದೇವಮಾನದ ಆಯುಷ್ಯ. ಅದೂ ಮೇಲಿನ ಲೋಕದಲ್ಲಿ.
ಒಟ್ಟಿನಲ್ಲಿ ಅವನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಕಾಲ ಲೋಕಲೋಕಾಂತರದ ಬದುಕನ್ನು ಅನುಭವಿಸಿದ್ದ.
ಅವನು ಕಲಿತದ್ದಂತೂ ಯುಗಯುಗಗಳ ಕಾಲ ಜಗತ್ತಿಗೆ ಕಲಿಸಿದವರಲ್ಲಿ.
ಒಡನಾಡಿದ್ದು, ಗುದ್ದಾಡಿದ್ದು ಯಾವುದೂ ಸಾಮಾನ್ಯರ ಜೊತೆಯಲ್ಲಲ್ಲ. ಅಂತವನು ಕ್ಷಣಕ್ಷಣವೂ ಚುಚ್ಚುವ ಬಾಣಗಳ ಮೇಲೆ ಸಾವನ್ನು ಕಾಯುತ್ತಾ ಮಲಗಿದ್ದ. ಆಗ ಅವನಲ್ಲಿ ಮುಂದಿನ ಸಾರ್ವಭೌಮ ಆಡಳಿತದ ಮಾರ್ಗದರ್ಶನ ಕೇಳಿದ.
ಭೀಷ್ಮ ಹೇಳುತ್ತಾ ಹೋದ…
