ವಿ ಕೃ ಗೋಕಾಕ್ ಅವರ ಭಾರತ ಸಿಂಧುರಶ್ಮಿ : ಪುನರಾವಲೋಕನ / Vi Kru Gokak Avara Bharatha Sindhu Rashmi Punaravalokana
Author: V.K.Gokhak
Pages:203
Edition: 2012
Book Size: 1/8th Demmy
Binding: Paper Back
Publisher: Kuvempu Institute of kannada
Specification
Description
ವಿ ಕೃ ಗೋಕಾಕ್ ಅವರ ಭಾರತ ಸಿಂಧುರಶ್ಮಿ : ಪುನರಾವಲೋಕನ / Vi Kru Gokak Avara Bharata Sindhu Rashmi Punaravalokana – ಕವಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಕನ್ನಡ ಸಾಹಿತ್ಯದಲ್ಲಿ ವಿಶೆಷವಾಗಿ 20ನೇ ಶತಮಾನದ ಮಹಾಕಾವ್ಯಗಳಲ್ಲಿ ಮಹತ್ವದ ಕೊಡುಗೆಯೂ ಆಗಿದೆ.ಇದು ಮಹಾಕಾವ್ಯದ 2ನೇ ಭಾಗವಾಗಿದೆ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ.
