ಕಥೆ ಮತ್ತು ಕಥಾವಸ್ತು / Kathe Mattu Kathavastu
ಕಥೆ ಮತ್ತು ಕಥಾವಸ್ತು / Kathe Mattu Kathavastu Original price was: ₹170.Current price is: ₹153.
Back to products
ಸಾಹಿತ್ಯ ಮತ್ತು ಪ್ರತೀಕ / Sahitya Mattu Prathika
ಸಾಹಿತ್ಯ ಮತ್ತು ಪ್ರತೀಕ / Sahitya Mattu Prathika Original price was: ₹80.Current price is: ₹72.

ಸನ್ಯಾಸಿಯ ಬದುಕು / Sanyasiya Baduku

Author: Dr.K. Shivarama Karantha

Pages: 220

Edition: 2024

Book Size: 1/8th Demmy

Binding: Paper Back

Publisher: Sapna Book House

Specification

Original price was: ₹160.Current price is: ₹144.

In stock

Description

ಸನ್ಯಾಸಿಯ ಬದುಕು / Sanyasiya Baduku – ಶಿವರಾಮ ಕಾರಂತರ ಕಾದಂಬರಿ-ಸಂನ್ಯಾಸಿಯ ಬದುಕು, ವಿಮರ್ಶಕರ ಗಮನ ಸೆಳೆದಿದೆ. ಸೋಗಿನ ಸನ್ಯಾಸತ್ವಕ್ಕಿಂತ ಮಾನವೀಯ ಅಂತಃಕರಣದ ಸಂಸಾರಿಕ ಬದುಕು ಸಾರ್ಥಕ ಎಂಬ ಸಂದೇಶ ಈ ಕಾದಂಬರಿಯಲ್ಲಿದೆ. ಸುಮಿತ್ರೆಗೆ ಕುಂದಾಪುರ ಬಳಿಯ ಶಂಕರರಾಯರಿಗೆ ಮದುವೆ ಮಾಡಿಕೊಟ್ಟಿದ್ದು, ಗೋಪು ಹಾಗೂ ರಾಧೆ ಎಂಬ ಮಕ್ಕಳಿದ್ದರು. ಮೊದಮೊದಲು ಚೆನ್ನಾಗೇ ನೋಡಿಕೊಂಡಿದ್ದ. ಸ್ವಾರ್ಥ ಸುಖದ ಚಿಂತನೆಯಲ್ಲಿ ಮೈಮರೆತಿದ್ದ. ಸಾಲ ಮಾಡಿದ್ದ. ತಾಳಿ ಸೇರಿದಂತೆ ಚಿನ್ನಾಭರಣಗಳನ್ನು ಮಾರಿದ್ದ. ನಂತರ ಆತ ಊರು ಬಿಡುತ್ತಾನೆ. ಉತ್ತರ ಭಾರತದುದ್ದಕ್ಕೂ ಸಂಚರಿಸುತ್ತಾನೆ. ಹೆಸರು ಶಿವಾನಂದ ಎಂದು ಬದಲಾಯಿಸಿಕೊಳ್ಳುತ್ತಾನೆ. ಭಾರತೀಯ ಉಡುಗೆಯಲ್ಲಿದ್ದ ಅಮೆರಿಕನ್ ಮಹಿಳೆಯನ್ನು(ಎನ್ನಾಬ್ರೈಟ್) ಭೇಟಿಯಾಗುತ್ತಾನೆ. ಆಕೆಗೆ ಅವಳ ಸಂಸ್ಕೃತಿ ಬೇಸರವುಂಟಾಗಿ ಭಾರತೀಯ ಸಂಸ್ಕೃತಿ ಉತ್ತಮ ಎಂದು ನಂಬಿಕೊಳ್ಳುತ್ತಾಳೆ. ಆಕೆಯೇ ಈತನಿಗೆ ಕೃಷ್ಣಾನಂದ ಎಂದು ಹೆಸರಿಸಿ ಆತನ ಬಗ್ಗೆ ಲೇಖನಗಳನ್ನು ಬರೆಯುತ್ತಾಳೆ. ಹಣ-ಕೀರ್ತಿ ಹೆಚ್ಚಿ ಮುಂಭೈಯ ಖಾರ್ ನಲ್ಲಿ ಆಶ್ರಮ ಸ್ಥಾಪಿಸುತ್ತಾರೆ. ಇತ್ತ ಕಡೆ ಸುಮಿತ್ರೆಗೆ ರುಕ್ಮಾಯಿಯ ಪರಿಚಯವಾಗುತ್ತದೆ. ಕೃಷ್ಣಾನಂದನ ಹೆಸರು ಕೀರ್ತಿ ಬೆಳೆಯುತ್ತದೆ. ಹೇಗೋ ಏನೋ, ಕೃಷ್ಣಾನಂದನು ಕುಂದಾಪುರದ ಶಂಕರರಾಯ ಎಂಬುದು ಜನರಿಗೆ ತಿಳಿದು ಹೋಗುತ್ತದೆ. ಸುಮಿತ್ರೆಯ ಕಷ್ಟಕ್ಕೆ ರುಕ್ಮಾಯಿ ಸಹಾಯ ಮಾಡುತ್ತಾಳೆ. ಸಮಿತ್ರೆಯ ಮನೆಯಲ್ಲಿ ರುಕ್ಮಾಯಿಯ ಫೋಟೋ ಶಾಶ್ವತವಾಗೇ ಉಳಿಯುತ್ತದೆ. ಬದುಕಿನಲ್ಲಿ ಕಷ್ಟದಲ್ಲಿರುವಾಗ ಸಹಾಯಕ್ಕೆ ಬರುವವರೇ ನಿಜವಾದ ಸಂಬಂಧಿಕರು ಎಂಬ ಸಂದೇಶ ಈ ಕಾದಂಬರಿಯಲ್ಲಿದೆ.