ಹಯವದನ / Hayavadana
Author: Girish Karnad
Pages:94
Edition: 2025
Book Size: 1/8th Demmy
Binding: Paper Back
Publisher: Manohara Grantha Mala
Specification
Description
ಹಯವದನ / Hayavadana – ಗಿರೀಶ್ ಕಾರ್ನಾಡ್ ಅವರ ‘ಹಯವದನ’ ಕನ್ನಡದ ಪ್ರಮುಖ ನಾಟಕಗಳಲ್ಲಿ ಒಂದಾಗಿದ್ದು, ಇದು 1970 ರಲ್ಲಿ ರಚಿತವಾದ ಎರಡು-ಅಂಕಗಳ ನಾಟಕವಾಗಿದೆ. ಈ ನಾಟಕವು ‘ಬೃಹತ್ಕಥಾ’ ಮತ್ತು ಥಾಮಸ್ ಮಾನ್ ಅವರ ‘ಟ್ರಾನ್ಸ್‌ಪೋಸ್ಡ್ ಹೆಡ್ಸ್’ ಕಥೆಯನ್ನು ಆಧರಿಸಿದೆ ಮತ್ತು ದೇಹ ಮತ್ತು ಮನಸ್ಸಿನ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತದೆ. ಇಬ್ಬರು ಸ್ನೇಹಿತರಾದ ದೇವದತ್ತ ಮತ್ತು ಕಪಿಲರ ಕಥೆಯು, ಪದ್ಮಿನಿ ಎಂಬ ಹೆಣ್ಣುಮಕ್ಕೋಸ್ಕರ ಹೋರಾಡುತ್ತವೆ. ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶರಿ ಶ್ರೀಮತಿ ಸುನೀಲಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು. ಕಳೆದ ದಶಕಗಳಿಂದಲೂ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಲೇ ಇರುವ ಸಾರ್ವಕಾಲಿಕ ನಾಟಕ ಎಂದರೂ ಅಡ್ಡಿ ಇಲ್ಲ. ಈಗಾಗಲೇ ಅನೇಕ ಪುನರ್ ಮುದ್ರಣಗಳನ್ನು ಕಂಡಿದೆ.
