Back to products
ಶೋಧ / Shodha
ಶೋಧ / Shodha Original price was: ₹50.Current price is: ₹45.

ಹಸೀನಾ ಮತ್ತು ಇತರ ಕಥೆಗಳು / Haseena Mattu Ithara Kathegalu

Author: Banu Mushtaq

Pages:763

Edition: 2025

Book Size: 1/8th Demmy

Binding: Paper Back

Publisher: Abhiruchi Prakashana

Original price was: ₹750.Current price is: ₹675.

In stock

Description

ಹಸೀನಾ ಮತ್ತು ಇತರ ಕಥೆಗಳು / Haseena Mattu Ithara Kathegalu –  “ಹಸೀನಾ ಮತ್ತು ಇತರ ಕಥೆಗಳು” (Haseena Mattu Itara Kathegalu) ಎಂಬುದು ಲೇಖಕಿ ಬಾನು ಮುಸ್ತಾಕ್ (Banu Mustaq) ಅವರ ಜನಪ್ರಿಯ ಕನ್ನಡ ಕಥಾ ಸಂಕಲನವಾಗಿದೆ. ಬಾನು ಮುಷ್ತಾಕ್ ಅವರ ಕತೆಗಳಲ್ಲಿ ಮುಖ್ಯವಾಗಿ ಮೂರು ನೆಲೆಗಳಿವೆ. ವ್ಯವಸ್ಥೆ ಯೊಂದಿಗಿನ ಮುಖಾಮುಖಿ, ಬಡತನ ಮತ್ತು ಹೆಣ್ಣಿನ ಕೊನೆಯಿರದ ನೋವಿನ ಬದುಕು – ಇವು ಅವರ ಕತೆಗಳ ಪ್ರಧಾನ ವಸ್ತು ವಿಶೇಷಗಳು. ‘ನನ್ನ ಕೃತಿಗಳಲ್ಲಿ ಹೆಣ್ಣೆ ವಿರಾಜಮಾನಳಾಗಿದ್ದಾಳೆ’ ಎಂದು ಸ್ವತಃ ಲೇಖಕಿಯೇ ಘೋಷಿಸಿದ್ದರೂ ಅವರ ಕೃತಿಗಳಲ್ಲಿ ಹೆಣ್ಣಿನಷ್ಟೇ ಈ ಎರಡೂ ಅಂಶಗಳೂ ಪ್ರಧಾನವಾಗಿ ಕಾಣಿಸುತ್ತವೆ. ಈ ಮೂರರ ಅನನ್ಯ ನೇಯ್ಗೆಯೇ ಬಾನು ಅವರ ಕತೆಗಳ ಮೂಲ ವಿನ್ಯಾಸ ಎಂದು ನನಗನ್ನಿಸುತ್ತದೆ.

ವ್ಯವಸ್ಥೆಯನ್ನು ಬಾನು ಮುಖಾಮುಖಿಯಾಗುವ ನಿಲುವೇ ನನಗೆ ತುಂಬಾ ವಿಶಿಷ್ಟವಾಗಿ ಕಾಣಿಸುತ್ತದೆ. ಬಾನು ಅವರ ಕತೆಗಳ ಮಹತ್ವವಿರುವುದೇ ಈ ಅಂಶದಲ್ಲಿ. ತನ್ನ ವಾರಿಗೆಯ ಲೇಖಕಿಯರಿಗಿಂತ ಇವರು ಭಿನ್ನರಾಗುವುದು ಈ ಕಾರಣಕ್ಕೆ. ವ್ಯವಸ್ಥೆಯನ್ನು ಬಾನು ಸ್ತ್ರೀವಾದಿ ಹಿನ್ನೆಲೆಯಲ್ಲಿ ಬದಲಾದ ಕಾಲ ಸನ್ನಿವೇಶದ ಹಿನ್ನೆಲೆಯಲ್ಲಿ ಎನ್ನುವುದಕ್ಕಿಂತ ಹೆಚ್ಚಾಗಿ ಶುದ್ಧ ಮಾನವೀಯ ನೆಲೆಯಲ್ಲಿ ಮುಖಾಮುಖಿಯಾಗುತ್ತಾರೆ. ಅವರ ಈ ನಿಲುವಿನಿಂದಾಗಿ ಸ್ತ್ರೀವಾದಿ ದೃಷ್ಟಿಕೋನಕ್ಕಿರಬಹುದಾದ ಮಿತಿ ಮತ್ತು ಅಪಾಯಗಳನ್ನು ಅವರು ಶಕ್ತವಾಗಿ ದಾಟಿಬಿಟ್ಟಿದ್ದಾರೆ. ಅವರ ಕತೆಗಳಿಗೆ ವಿಸ್ತಾರ ಒದಗಿ ಬರುವುದು ಮೂಲತಃ ಈ ಕಾರಣಕ್ಕೆ. ಅಪ್ಪಟ ಮಾನವೀಯ ನೆಲೆಯಲ್ಲಿ ಹೇಗೂ ಸಮರ್ಥಿಸಿಕೊಳ್ಳಲು ಅಸಾಧ್ಯವಾದ ವ್ಯವಸ್ಥೆಯ ಕ್ರೌರ್ಯದ ಅನಾವರಣ ಈ ಕಥಾ ಸಂಕಲನದ ಮುಖ್ಯ ಸಾಧನೆಗಳಲ್ಲಿ ಒಂದು. ಲೇಖಕಿಯರನ್ನೂ ವಿಸ್ತ್ರತ ಹಿನ್ನೆಲೆಯಲ್ಲಿಟ್ಟು ಚರ್ಚೆ ಮಾಡಬೇಕಾಗಿರುವುದು ನಮ್ಮ ಈ ಹೊತ್ತಿನ ಅಗತ್ಯ ವಸ್ತು ಅನಿವಾರ್ಯತೆ ಎನ್ನುವ ನನ್ನ ಮಾತಿಗೆ ಪೂರಕವಾದ, ಬಲವಾದ ಕಾರಣ ಇದು.