ಅಂಜುಮಲ್ಲಿಗೆ / Anjumallige
Author: Girish Karnad
Pages:92
Edition: 2021
Book Size: 1/8th Demmy
Binding: Paper Back
Publisher: Manohara Grantha Mala
Description
ಅಂಜುಮಲ್ಲಿಗೆ / Anjumallige – ಗಿರೀಶ್ ಕಾರ್ನಾಡರ ಅಂಜುಮಲ್ಲಿಗೆಯು ಸಮಕಾಲೀನ ವಿಷಯವನ್ನು ಒಳಗೊಂಡಿರುವ ನಾಟಕವಾಗಿದೆ. ಇದು ಯಾಮಿನಿ ಮತ್ತು ಆಕೆಯ ತಮ್ಮ ಸತೀಶರ ನಡುವಿನ ಸಂಕೀರ್ಣ ಸಂಬಂಧವನ್ನು ಆಧರಿಸಿದೆ, ಈಜಿಪ್ಟ್ನ ರಾಜಮನೆತನದಲ್ಲಿ ಸಹೋದರ-ಸಹೋದರಿಯರ ವಿವಾಹದ ಕಥೆಯೊಂದಿಗೆ ಆಧುನಿಕ ಸಂಬಂಧಗಳನ್ನು ಹೋಲಿಕೆ ಮಾಡುತ್ತದೆ. ಈ ನಾಟಕವು ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳಿಲ್ಲದೆ ಸಾಮಾಜಿಕ ವಿಷಯದ ಮೇಲಿರುವ ಕಾರ್ನಾಡರ ವಿಭಿನ್ನ ಪ್ರಯತ್ನವಾಗಿದೆ. ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.
