ಅಟಾಮಿಕ್ ಹ್ಯಾಬಿಟ್ಸ್ / Atomic Habits

Author:Dr Shivanand Bekal

Pages:271

Edition: 2024

Book Size: 1/8th Demmy

Binding: Paper Back

Publisher: Manjul Publishing House

Specification

Original price was: ₹399.Current price is: ₹359.

In stock

Description

ಅಟಾಮಿಕ್ ಹ್ಯಾಬಿಟ್ಸ್ / Atomic Habits -ಜನರು ಯೋಚಿಸುವುದೇ ಹಾಗೆ, ನೀವು ನಿಮ್ಮ ಬದುಕನ್ನು ಬದಲಿಸಲು ಬಯಸಿದರೆ, ಬಹುದೊಡ್ಡ ರೀತಿಯಲ್ಲಿ ಯೋಚಿಸಬೇಕಂತ. ಆದರೆ ಅಭ್ಯಾಸಗಳ ಕುರಿತಂತೆ ವಿಶೇಷಜ್ಞರೂ, ಜಗತ್ತಿನಾದ್ಯಂತ ಖ್ಯಾತನಾಮರೂ ಆದ ಜೇಮ್ಸ್ ಕ್ಲಿಯರ್ ಬೇರೊಂದು ವಿಧಾನವನ್ನು ಕಂಡುಹಿಡಿದಿದ್ದಾರೆ. ಅವರ ಪ್ರಕಾರ ವಾಸ್ತವಿಕ ಬದಲಾವಣೆ ಸಹಸ್ರಾರು ಚಿಕ್ಕ ಚಿಕ್ಕ ನಿರ್ಣಯಗಳ ಸಂಯುಕ್ತ ಪ್ರಭಾವದಿಂದ ನಡೆಯುತ್ತದೆ. ಚಿಕ್ಕ ನಿರ್ಣಯಗಳಲ್ಲಿ ಪ್ರತಿನಿತ್ಯ ಎರಡು ಪುಶ್-ಅಪ್ ಮಾಡುವುದು, ಐದು ನಿಮಿಷ ಮುಂಚಿತವಾಗಿ ಏಳುವುದು, ಒಂದು ಪುಟದಷ್ಟು ಹೆಚ್ಚು ಓದುವಂತಹ ಉದಾಹರಣೆಗಳನ್ನು ಅವರು ನೀಡುತ್ತಾರೆ. ಅದನ್ನೇ ಅವರು ‘ಅಟಾಮಿಕ್ ಹ್ಯಾಬಿಟ್ಸ್’ ಎಂದು ಕರೆಯುತ್ತಾರೆ. ತಮ್ಮ ಈ ಕ್ರಾಂತಿಕಾರಿ ಪುಸ್ತಕದಲ್ಲಿ ಕ್ಲಿಯರ್, ಬದುಕಿನ ಚಿಕ್ಕ ಬದಲಾವಣೆಗಳು ಕೊನೆಗೂ ಹೇಗೆ ಬದುಕನ್ನು ಬದಲಿಸುತ್ತದೆ ಎಂಬುದನ್ನು ವಿಶದಪಡಿಸುತ್ತಾರೆ. ಅವರು ಹೇಳುವ ಸುಲಭ ತಂತ್ರಗಳು ಯಾರದೇ ಬದುಕಿನಲ್ಲಿನ ಅಸ್ತವ್ಯಸ್ತತೆಯನ್ನು ಕ್ರಮಬದ್ಧಗೊಳಿಸಿ, ಅದನ್ನು ಅಪೇಕ್ಷಿತ ಮಟ್ಟದಲ್ಲಿ ಸುಲಭವಾಗಿಸುತ್ತದೆ. ಈ ತಾಂತ್ರಿಕತೆಗಳಲ್ಲಿ ಅವರು ಅಭ್ಯಾಸಗಳನ್ನು ಕ್ರಮಬದ್ಧಗೊಳಿಸಲು ಮರೆತುಬಿಟ್ಟ ಕಲೆ, ಎರಡು ನಿಮಿಷದ ನಿಯಮದ ಅಪ್ರತ್ಯಕ್ಷ ಶಕ್ತಿ ಹಾಗೂ ಗೋಲ್ಡೀ ಲಾಕ್ಸ್ ವಲಯದಲ್ಲಿ ಪ್ರವೇಶಿಸುವ ಜಾಣ್ಮೆಗಳ ಉಲ್ಲೇಖವನ್ನು ಮಾಡುತ್ತಾರೆ. ಆಧುನಿಕ ಮನೋವಿಜ್ಞಾನ ಮತ್ತು ನ್ಯೂರೋಸಯನ್ಸ್‌ನ ಆಳವಾದ ಶೋಧದ ಆಧಾರದಲ್ಲಿ ಈ ಚಿಕ್ಕ ಬದಲಾವಣೆಗಳು ಹೇಗೆ ಮುಖ್ಯವಾಗುತ್ತವೆ ಎಂಬುದನ್ನು ಅವರು ವಿಶದಪಡಿಸುತ್ತಾರೆ. ಜತೆಗೆ ಅವರು ಒಲಿಂಪಿಕ್ ಸ್ವರ್ಣ ಪದಕ ವಿಜೇತರನ್ನು, ಶ್ರೇಷ್ಠ ಮಟ್ಟದ ಸಿಇಒ ಹಾಗೂ ಪ್ರಖ್ಯಾತ ವಿಜ್ಞಾನಿಗಳ ಪ್ರೇರಕ ಕಥೆಗಳನ್ನು ಹೇಳುತ್ತಾರೆ. ಉತ್ಪಾದನೆ, ಉತ್ಸಾಹಿತರನ್ನಾಗಿಸಲು ಮತ್ತು ಪ್ರಸನ್ನಚಿತ್ತರಾಗಿರಲು ಚಿಕ್ಕ ಅಭ್ಯಾಸಗಳನ್ನು ಹೇಗೆಲ್ಲಾ ಅಂತಹ ವ್ಯಕ್ತಿಗಳು ಅಳವಡಿಸಿಕೊಂಡರು ಎಂಬುದನ್ನವರು ವಿವರಿಸಿದ್ದಾರೆ.