ಅಬಚೂರಿನ ಪೋಸ್ಟಾಫೀಸು / Abchurina Postoffice

Author: K.P. Poornachandra Tejasvi

Pages: 110

Edition: 2025

Book Size: 1/8th Demmy

Binding: Paper Back

Publisher: Pustaka Prakashana

Original price was: ₹114.Current price is: ₹103.

In stock

Description

ಅಬಚೂರಿನ ಪೋಸ್ಟಾಫೀಸು / Abachurina Postoffice – ತೇಜಸ್ವಿಯವರು ನವ್ಯ ಸಾಹಿತ್ಯದಿಂದ ಸಂಪೂರ್ಣ ವಿಮುಖಗೊಂಡ ಸಂದರ್ಭದಲ್ಲಿ ಬಂದ ಕಥಾ ಸಂಕಲನ ’ಅಬಚೂರಿನ ಪೋಸ್ಟಾಫೀಸು’ (1973). ಈ ಸಂಕಲನಕ್ಕೆ ತೇಜಸ್ವಿ ಬರೆದಿರುವ ಮುನ್ನುಡಿ ‘ಪೊಸ ದಿಗಂತದ ಕಡೆಗೆ’ ಎಂಬುದು ಆವರೆಗಿನ ಕನ್ನಡ ಸಾಹಿತ್ಯ, ಸಮಾಜ, ತಾತ್ವಿಕತೆ ಚಳವಳಿಗಳ ಹಿನ್ನೆಲೆಯಲ್ಲಿ ವಿಮರ್ಶೆಗೆ ಒಳಪಡಿಸುತ್ತದೆ. ಮತ್ತು ಮುಂದೆ ಕನ್ನಡಕ್ಕೆ ಬೇಕಿರುವ ಸಾಹಿತ್ಯದ ಸ್ವರೂಪವನ್ನೂ ಮಂಡಿಸುತ್ತದೆ. ಈ ಸಂಕಲನದಲ್ಲಿ ಇರುವ ’ಅಬಚೂರಿನ ಪೋಸ್ಟಾಫೀಸು’ ಕತೆ ಚಲನಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(1973) ಪಡೆದಿದೆ. ‘ತಬರನ ಕತೆ’ ಆರ್. ನಾಗೇಶ್ ಅವರ ನಿರ್ದೇಶನದಲ್ಲಿ ನಾಟಕವಾಗಿ ಅನೇಕ ಪ್ರಯೋಗಗಳನ್ನು ಕಂಡಿದೆ. ಪುಸ್ತಕ ರೂಪದಲ್ಲಿಯೂ ಪ್ರಕಟವಾಗಿದೆ(1986) ಮತ್ತು ಚಲನಚಿತ್ರವಾಗಿ ಅತ್ಯುತ್ತಮ ಕತೆ ಮತ್ತು ಸಂಭಾಷಣೆಗಾಗಿ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ (1987) ಪಡೆದಿದೆ. ‘ಕುಬಿ ಮತ್ತು ಇಯಾಲ ಚಲನಚಿತ್ರವಾಗಿ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (1990) ಪಡೆದಿದೆ. ಜೊತೆಗೆ ‘ತುಕ್ಕೋಜಿ’ ಮತ್ತು ‘ಅವನತಿ’ ಕಥೆಗಳನ್ನು ಒಳಗೊಂಡಿರುವ ಈ ಸಂಕಲನದ ಕಥೆಗಳು ಮರಾಠಿ, ಹಿಂದಿ, ಮಲಯಾಳಂ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.