ಆಟಗಾರ : ಕಾಲಾಯ ತಸ್ಮೈ ನಮಃ / Atagara : Kalaya Tasmai Namaha
Author:Arjun Devaladakere
Pages:275
Edition: 2018
Book Size: 1/8th Deemy
Binding: Paper Back
Publisher:Devaladakere Prakashana
Specification
Description
ಆಟಗಾರ : ಕಾಲಾಯ ತಸ್ಮೈ ನಮಃ / Atagara Kalaya Tasmai Namaha -ಅರ್ಜುನ್ ದೇವಾಲದಕೆರೆ ಅವರ ಕಾದಂಬರಿ. ಕೃತಿಯ ಕುರಿತು ಬರೆಯುತ್ತಾ ‘ಕನ್ನಡದ ಯುವಕ-ಯುವತಿಯರು ಕನ್ನಡ ಕಾದಂಬರಿಗಳನ್ನು ಓದುವುದಿಲ್ಲ, ಅದರಲ್ಲೂ ಈ ಕಾರ್ಪೋರೇಟ್ ಕನ್ನಡಿಗರು ಕೇವಲ ಇಂಗ್ಲೀಷ್ ಕಾದಂಬರಿಗಳನ್ನು ಮಾತ್ರ ಓದುತ್ತಾರೆ ಎಂಬ ಆರೋಪಗಳನ್ನು ಸುಳ್ಳಾಗಿಸಿದ್ದು, ಅವಳು..ಬದುಕ ಕಲಿಸಿದವಳು ಕಾದಂಬರಿ. ಜನಸಾಮಾನ್ಯರ ದೃಷ್ಠಿಯಲ್ಲಿ ಯೋಚಿಸಿ, ಜನಸಾಮಾನ್ಯನ ಭಾಷೆಯಲ್ಲಿ ಬರೆದರೆ, ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ಪುಸ್ತಕಗಳನ್ನು ಓದುತ್ತಾನೆ ಎಂಬುದನ್ನು ನನ್ನಂತಹ ಚೊಚ್ಚಲ ಕಾದಂಬರಿಕಾರನ ಪುಸ್ತಕವನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಋಜುವಾತುಪಡಿಸಿದ್ದಾನೆ ಕನ್ನಡಿಗ ಎನ್ನುತ್ತಾರೆ ಲೇಖಕ ಅರ್ಜುನ್ ದೇವಾಲದಕೆರೆ. ಆಟಗಾರ ಕಾದಂಬರಿಯಲ್ಲಿ ಎಲ್ಲವೂ ಇದೆ, ನನ್ನ ಸುತ್ತ ನಡೆದ ಹಲವು ಸತ್ಯ ಘಟನೆಗಳನ್ನು ಒಂದು ಸೃಜನಶೀಲ ಚೌಕಟ್ಟಿನಲ್ಲಿಟ್ಟು, ಕಲ್ಪನೆಯ ಕುಂಚದಲ್ಲಿ ಕಾದಂಬರಿಯಾಗಿಸಿದ್ದೇನೆ. ಕಾರ್ಪೋರೇಟ್ ನಿಂದ ಕಾನನದವರೆಗೂ ಕಥೆಯ ವಿಸ್ತಾರವಿದೆ. ಒಂದು ನವಿರು ಪ್ರೇಮದೆಳೆಯ ಜೊತೆ, ಕುತೂಹಲಕಾರಿ ಕಥಾಹಂದರವನ್ನು ಹೆಣೆಯಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ. ಯುವ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹೆಣೆದಿರುವ ಹಂದರ ಪ್ರಬುದ್ಧ ಓದುಗರನ್ನು ಕಾಡುವಂತಿವೆ.
