ನಾತಿಚರಾಮಿ / Naaticharaami
ನಾತಿಚರಾಮಿ / Naaticharaami Original price was: ₹195.Current price is: ₹176.
Back to products
ನನ್ನ ಭಾವ ನಿನ್ನ ರಾಗ / Nanna Bhaava Ninna Raaga
ನನ್ನ ಭಾವ ನಿನ್ನ ರಾಗ / Nanna Bhaava Ninna Raaga Original price was: ₹200.Current price is: ₹180.

ಆರಾಧಿತೆ / Aradhite

Author: Smt. Saisuthe

Pages: 128

Edition: 2022

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹110.Current price is: ₹99.

In stock

Description

ಆರಾಧಿತೆ / Aradhite – ಗಂಡಿನ ದೈಹಿಕ ಕಾಮನೆಗಳಿಗಷ್ಟೇ ಅಲ್ಲದೆ ಅವನ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಿ ಜೊತೆಗೂಡುವ ಹೆಣ್ಣು ಕೇವಲ ಪ್ರೀತಿಸಲ್ಪಡುವುದಷ್ಟೇ ಅಲ್ಲ, ಆರಾಧಿಸಲ್ಪಡುತ್ತಾಳೆ,ಯಾವ ಹೆಣ್ಣು ಆರಾಧಿಸಲ್ಪಡುತ್ತಾಳೋ ಅಂತಹ ಹೆಣ್ಣು ನಿಜಕ್ಕೂ ಮಾದರಿಯಾಗಬಲ್ಲಳು.ಪ್ರೀತಿ ಕೇವಲ ಗಂಡು ಹೆಣ್ಣಿನ ನಡುವಿನ ಸಂಬಂಧವಲ್ಲ.ಸಂಗಾತಿಯ ಸುತ್ತಲಿನ ಸಂಬಂಧಗಳನ್ನು ಬಸವಳಿಯದಂತೆ ಕಾಪಿಟ್ಟುಕೊಂಡು ಸಾಗುವುದು ಪ್ರೀತಿಸಲ್ಪಟ್ಟವರಿಗೆ ಕೊಡುವ ನಿಜವಾದ ಗೌರವ.ಆದರೆ ದಾಪುಗಾಲು ಹಾಕುತ್ತಾ ಸಾಗುತ್ತಿರುವ ಜಗದ ಬದಲಾವಣೆಯ ಎದುರು ಕ್ಷೀಣಿಸುತ್ತಿರುವ ಭಾವನಾತ್ಮಕ ಸಂಬಂಧಗಳಲ್ಲಿ ಇಂದು ಇದನ್ನೆಲ್ಲ ಅಪೇಕ್ಷಿಸುವಂತೆಯೇ ಕಂಡುಬರುವುದಿಲ್ಲ.ಇದಕ್ಕೆ ಹೊರತಾಗಿಯೂ ಇರುವವರು ನಮ್ಮೆಲ್ಲರ ನಡುವೆ ಇರುತ್ತಾರೆ.ಆದರೆ ಅವರು ನಮ್ಮ ಅನುಭವಕ್ಕೆ ಸಿಕ್ಕಿರಲಾರರು ಅಷ್ಟೇ.ಅಂತದ್ದೇ ಪಾತ್ರ ಈ ಕಾದಂಬರಿಯಲ್ಲಿರುವ ರಾಧಾಳದ್ದು.ಮಗುವಿನಂತಹ ಮುಗ್ಧತನ, ಎಲ್ಲರನ್ನೂ ಪ್ರೀತಿಸುವ ಸದ್ಗುಣ,ಇತರರಿಗೆ ತನ್ನಿಂದ ನೋವಿಗದಂತೆ ಎಚ್ಚರವಹಿಸುವ ಒಳ್ಳೆಯತನ,ಪ್ರಕೃತಿಯ ಚೆಲುವನ್ನು ಆಸ್ವಾಧಿಸುವ ನವಿರುತನಗಳಿಂದ ಓದುಗರಿಗೆ ಹತ್ತಿರದ ಗೆಳತಿಯಾಗುತ್ತಾಳೆ.ಇದಕ್ಕೆಲ್ಲಾ ತದ್ವಿರುದ್ಧದ ಸ್ವಭಾವ ಕಮಲಳದ್ದು.ಒಡಹುಟ್ಟಿದವರ ರೂಪದಲ್ಲಿ, ಗುಣಗಳಲ್ಲಿ ವೈರುದ್ಯಗಳಿರಬಹುದು.ಆದರೆ ಎಲ್ಲಿಯೂ ಸಾಮ್ಯತೆಯನ್ನು ಕಾಣದೇ ಇರಲಾಗದು.ಇದು ಸಹಜ ಕೂಡ.ಹಾಗಿದ್ದರೆ ರಾಧಾ, ಕಮಲರ ನಡುವಿನ ಈ ಭಿನ್ನ ಗುಣಸ್ವಾಭಾವದ ಹಿಂದಿನ ರಹಸ್ಯವೇನು? ತಾಯಿಯಂತೆ ಮಗಳು ಎನ್ನುವ ನುಡಿಯೇನೋ ಸರಿ.ಆದರೆ ಸುಸಂಸ್ಕೃತ ವಾತಾವರಣದಲ್ಲಿ ಹುಟ್ಟಿ, ಹಾಗೆಯೇ ಜೀವಿಸಿದ ಸಾವಿತ್ರಮ್ಮ ಕಮಲಳ ವಿಷಯದಲ್ಲಿ ಅದೂ ಇಳಿವಯಸ್ಸಿಗೆ ಗಂಡನಿಂದ ಸಂಶಯಕ್ಕೊಳಗಾದ ಆಘಾತದ ಹಿಂದಿನ ಕಾರಣಗಳೇನು? ಈ ಎರಡು ವಿಷಯಗಳೆ ಈ ಕಾದಂಬರಿಯ ಮುಖ್ಯ ವಿಷಯಗಳು.