ಆರಿದ ಚಹಾ / Aarida Chaha
Author: Beechi
Pages:218
Edition: 2021
Book Size: 1/8th Demmy
Binding: Paper Back
Publisher: Beechi Prakasahana
Specification
Description
ಆರಿದ ಚಹಾ / Aarida Chaha –
ಸಾಮಾನ್ಯವಾಗಿ ಎಲ್ಲರೂ ಚಹಾವನ್ನು ಬಿಸಿಯಾಗೇ ಸೇವಿಸಲು ಇಷ್ಟಪಡುತ್ತಾರೆ. ಆದರೆ ಆರಿದ ಚಹಾಕ್ಕೂ ರುಚಿಯಿರುತ್ತದಾ? ಅದನ್ನೂ ಬಯಸುವವರಿರುತ್ತಾರಾ? ಬೀಚಿಯವರ ಈ ಆರಿದ ಚಹಾವಂತೂ ಎಲ್ಲರೂ ಬಯಸುವಂತಹದ್ದು. ಮೂಲತಃ ಚಹಾದ ರುಚಿ ಕಹಿ. ಬೀಚಿಯವರ ಈ ಕಾದಂಬರಿಯೂ ಓದುವಾಗ ಒಗರೆನ್ನಿಸಿದರೂ ಅದರ ಸವಿ ಮಾತ್ರ ಅದ್ಭುತ.
ರಘುನಾಥರಾಯ ಕಾದಂಬರಿಯ ನಾಯಕ. ತಂದೆ ತಾಯಿಯನ್ನು ಕಳೆದುಕೊಂಡು ಒಬ್ಬಂಟಿಯಾದಾಗ ಪ್ರಭಾಕರಶಾಸ್ತ್ರಿಗಳ ಒತ್ತಾಸೆಯಿಂದ ಶಂಕರರಾಯರ ಮತ್ತು ಕಾಮೇಶ್ವರಮ್ಮನ ಏಕೈಕ ಪುತ್ರಿಯಾದ ಕಳಾವತಿಯ ಕೈಹಿಡಿಯುತ್ತಾನೆ. ಕೆಲಸವಿಲ್ಲದ್ದರಿಂದ ಮನೆಅಳಿಯನೂ ಆಗುತ್ತಾನೆ. ಕ್ರಮೇಣ ಮನೆಯಲ್ಲಿ ಕೆಲಸ ಮಾಡುವ ಅಡುಗೆಯವನೂ ಆಗುತ್ತಾನೆ. ಒಮ್ಮೆ ಶಂಕರರಾಯರ ಮನೆಗೆ ಅವರ ಗೆಳೆಯ ರಾಮನಾಥಯ್ಯ ಸಂಸಾರ ಸಮೇತ ಕಾರಿನಲ್ಲಿ ಬರುವುದಾಗಿ ಪತ್ರ ಬರುತ್ತದೆ. ಈ ರಾಮನಾಥಯ್ಯ ಬೇರಾರೋ ಆಗಿರದೆ ರಘುನಾಥನ ಸೋದರಮಾವನಾಗಿರುತ್ತಾನೆ. ರಘುನಾಥನಿಗೆ ಒದಗಿದ ದುಃಸ್ಥಿತಿಯನ್ನು ಕಂಡು ಮರುಗಿದ ರಾಮನಾಥಯ್ಯ ತನ್ನ ಅಳಿಯನಿಗೆ ಹೇಳಿ ನಗರದಲ್ಲಿ ಒಂದು ಇನ್ಷೂರೆನ್ಸ್ ಕಂಪೆನಿಯಲ್ಲಿ ಕೆಲಸ ಕೊಡಿಸುತ್ತಾರೆ. ಅಲ್ಲಿಂದ ರಘುನಾಥ ಒಬ್ಬ ಮನುಷ್ಯನಾಗುತ್ತಾನೆ. ಕ್ರಮೇಣ ಕಳಾವತಿಯೂ ನಗರಕ್ಕೆ ಬಂದು ರಘುನಾಥನೊಡನೆ ಸಂಸಾರ ಹೂಡುತ್ತಾಳೆ.
