ಆರಿದ ಚಹಾ / Aarida Chaha
ಆರಿದ ಚಹಾ / Aarida Chaha Original price was: ₹175.Current price is: ₹158.
Back to products
ಮಾತನಾಡುವ ದೇವರುಗಳು / Mathanaduva Devarugalu
ಮಾತನಾಡುವ ದೇವರುಗಳು / Mathanaduva Devarugalu Original price was: ₹125.Current price is: ₹113.

ಆರು ಏಳು ಸ್ತ್ರೀ ಸೌಖ್ಯ / Aaru Elu Stree Soukya

Author: Beechi

Pages:154

Edition: 2025

Book Size: 1/8th Demmy

Binding: Paper Back

Publisher: Beechi   Prakasahana

Specification

Original price was: ₹150.Current price is: ₹135.

In stock

Description

ಆರು ಏಳು ಸ್ತ್ರೀ ಸೌಖ್ಯ / Aaru Elu Sthree Soukya -ಆರು ಏಳು ಸ್ತ್ರೀ ಸೌಖ್ಯ!!! ಅರೇ.. ಹೆಸರೇ ವಿಚಿತ್ರವಾಗಿದೆಯಲ್ಲ? ಸರಿ, ಹಾಗಂದ್ರೆ ಏನು? ಇದರಲ್ಲಿ ತಲೆಕೆಡಿಸಿಕೊಳ್ಳೊದೇನಿದೆ ತಗೊಂಡು ಓದಿ ನೋಡಿದ್ರಾಯ್ತು. ಮೊದಲ ಬಾರಿಗೆ ಪುಸ್ತಕದಂಗಡಿಯಲ್ಲಿ ಈ ಪುಸ್ತಕ ನೋಡಿದಾಗ ನನಗೆ ನಾನೇ ಹೇಳಿಕೊಂಡೆ.
ಬೀಚಿಯವರದ್ದು ಎಂದ ಮೇಲೆ ಖರೀದಿಸಲು ಮತ್ಯಾವ ಕಾರಣವೂ ಬೇಕಿಲ್ಲ, ಪುಸ್ತಕದ ಹೆಸರೂ ಇಲ್ಲಿ ನಗಣ್ಯವೇ.
ತಮ್ಮ ವಿಡಂಬನೆಯ ಇಕ್ಕಳದಲ್ಲಿ ಯಾರನ್ನು ಬಿಟ್ಟಿದ್ದಾರೆ ಬೀಚಿ? ಸತಿಸೂಳೆಯಿಂದ ಗರತಿಯ ಗುಟ್ಟಿನವರೆಗೆ, ಕಾಮಂಣನಂತಹ ರಾಜಕೀಯ ಫುಡಾರಿಗಳವರೆಗೆ, ಹೆಣ್ಣು ಕಾಣದ ಗಂಡಿನಿಂದ ಮೇಡಮ್ಮನ ಗಂಡನವರೆಗೆ.
ಅಷ್ಟೇ ಯಾಕೆ ಕೊನೆಗೆ ದೆವ್ವಗಳನ್ನೂ ಬಿಡಲಿಲ್ಲ ಕಾಣದ ಸುಂದರಿಯ ಕೈಯಲ್ಲಿ ಬದುಕಿನ ವೇದಾಂತವನ್ನೇ ಹೇಳಿಸಿಬಿಟ್ಟಿದ್ದಾರೆ.
ಇನ್ನು ಬೀಚಿಯವರ ಪುಸ್ತಕ ಎಂದರೆ ನಾಯಕ ತಿಮ್ಮನಿರಬೇಕಲ್ಲ. ಪೆದ್ದ ತಿಮ್ಮನ ತಲೆಯಿಂದ ಹಿಡಿದು ತಿಂಮ ಸತ್ತಾಗ ಎನ್ನುವವರೆಗೆ ಎಲ್ಲದಕ್ಕೂ ತಿಂಮ ಬೇಕು. ಕಡು ಬಡವನಾಗಿಯೂ, ಶ್ರೀಮಂತನಾಗಿ, ದಡ್ಡನಾಗಿ, ಜಾಣನಾಗಿ ನೈತಿಕತೆ, ಪ್ರಾಮಾಣಿಕತೆಗೆ ರೂಪವಾಗಿ, ಎಲ್ಲವೂ ಗಾಳಿಗೆ ತೂರುವ ಭಂಡನಾಗಿ ಅವನು ಒಂಥರಾ ಬಹುರೂಪಿ.
ಇಂತಹ ಬೀಚಿಯವರ ಕೃತಿಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ. ನಗಿಸುತ್ತಾ ನಗಿಸುತ್ತಲೇ ಬದುಕಿನ ಸತ್ಯಗಳನ್ನು ಬಿಚ್ಚಿಡುತ್ತ ಮೂತಿಗೆ ತಿವಿಯುತ್ತಾರೆ.
ಪುಸ್ತಕದ ತುಂಬೆಲ್ಲಾ ಹಾಸುಹೊಕ್ಕಂತಿರುವ ಹಾಸ್ಯ,ಚಂದದ ನಿರೂಪಣಾ ಶೈಲಿಗೆ ಅವರಿಗೆ ಅವರೇ ಸಾಟಿ.