ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು / Indina Kannada Kavyada Gottu Gurigalu

Author: V.K.Gokhak

Pages:168

Edition: 2018

Book Size: 1/8th Demmy

Binding: Paper Back

Publisher: Abhinava Prakashana

Original price was: ₹150.Current price is: ₹135.

In stock

Description

ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು / Indina Kannada Kavyada Gottu Gurigalu –  ವೈ.ಕೆ. ಗೋಕಾಕರ “ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು” ಎಂಬುದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿಮರ್ಶಿಸುವ ಪ್ರಬಂಧಗಳ ಸಂಕಲನವಾಗಿದೆ. ಇದರಲ್ಲಿ, ಕಾವ್ಯದ ವಿಮರ್ಶೆ, ಸಾಹಿತ್ಯದ ಐಕ್ಯತೆ, ವೈವಿಧ್ಯತೆ ಮತ್ತು ನವೀನತೆಯನ್ನು ಕುರಿತು ಚರ್ಚಿಸಲಾಗಿದೆ. ಈ ಪುಸ್ತಕವು ಕನ್ನಡ ಕಾವ್ಯದ ಸವಾಲುಗಳನ್ನು ಮತ್ತು ಅದರ ಭವಿಷ್ಯತ್ತನ್ನು ನಿರ್ದೇಶಿಸುವಲ್ಲಿ ಸಹಾಯಕವಾಗಿದೆ.  nಸಾಹಿತ್ಯಕ್ಕೆ ಸಂಸ್ಕೃತಿಯ ಒರೆಗಲ್ಲು, ಸಾಹಿತ್ಯ-ಕಾವ್ಯ, ಕಾವ್ಯದಲ್ಲಿ ವ್ಯಕ್ತಿತ್ವ ನಿರೂಪಣೆ, ಕಾವ್ಯದಲ್ಲಿ ಸ್ಫೂರ್ತಿ -ಸಾಧನೆಗಳು, ಕಾವ್ಯದಲ್ಲಿ ಹಾಸ್ಯ ವಿಡಂಬನೆ, ಗದ್ಯ-ಪದ್ಯ, ಸರಳ-ರಗಳೆ, ಸ್ವಚ್ಛಂಧ-ಛಂದ, ವಿಮರ್ಶೆಯ ರೀತಿ, ಶ್ರೀಯವರು, ಬೇಂದ್ರೆಯವರ ಕಾವ್ಯದಲ್ಲಿ ಪ್ರೀತಿ-ರೂಪರೇಷೆಗಳು, ತಳಿರು, ಪುಟ್ಟಪ್ಪನವರ ಕೊಳಲು ಹೀಗೆ ವಿವಿಧ ಅಧ್ಯಾಯಗಳಲ್ಲಿ ಅರ್ಥಪೂರ್ಣ ವಿಮರ್ಶಾ ಲೇಖನಗಳಿವೆ. ಕೃತಿಯ ಕುರಿತು ಸ್ವತಃ ಲೇಖಕ ವಿ.ಕೃ.ಗೋಕಾಕ ಅವರು ‘ಅಥಣಿಯಲ್ಲಿ(1932) ಹಾಗೂ ರಾಯಚೂರಿನಲ್ಲಿ (1934) ನಡೆದ ಕವಿಗೋಷ್ಠಿಯಲ್ಲಿ ಮಾಡಿದ ಭಾಷಣಗಳು, ‘ಜಯಕರ್ನಾಟಕ’ ದಲ್ಲಿ ಪ್ರಕಟಿತ ಲೇಖನಗಳು ಹಾಗೂ ಇತರೆ ಲೇಖನಗಳಿವೆ. ಆಧುನಿಕ ಸಾಹಿತ್ಯದ ಚರ್ಚೆಯ ಮುಖಾಂತರವಾಗಿ ಸಾಹಿತ್ಯ ತತ್ವಗಳ ನಿರೂಪಣೆಯ ಪದ್ಧತಿಯು ಅಷ್ಟರಮಟ್ಟಿಗೆ ಪ್ರಚಲಿತವಾಗಿರಲಿಲ್ಲ. ಪದ್ಯ ಕಾವ್ಯವನ್ನು ಕುರಿತ ಇಂತಹ ವಿಮರ್ಶೆಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ. ವಿಮರ್ಶೆಯೂ ಶಾಸ್ತ್ರವಿದ್ದಂತೆ ಕಲೆಯೂ ಹೌದು. ಸಾಹಿತ್ಯ ಕೃತಿಯನ್ನು ತೂಗಿ ನೋಡುವಾಗ ಬೇಕಾಗುವ ನ್ಯಾಯ ಬುದ್ದಿಯ ಜೊತೆಗೆ ಕಲ್ಪಕತೆಯೂ, ಸಹಾನುಭೂತಿಯೂ ಬೆರೆತುಕೊಂಡಿರದಿದ್ದರೆ ವಿಮರ್ಶೆಯು ಅಭಿಪ್ರಾಯದ ಸಂತೆಯಾಗುತ್ತದೆ. ಕಲ್ಪತೆಗೆ ಮೀಮಾಂಸೆಯ ತಾಳ ಮೇಳವಿಲ್ಲದಿದ್ದರೆ ವಿಮರ್ಶೆಯು ಅರ್ಧಾಂಗ ವಾಯು ಹಿಡಿದ ದೇಹದಂತೆ ಅಸಮರ್ಥವಾಗುತ್ತದೆ. ಈ ಸಮನ್ವಯವನ್ನು ಸಾಧಿಸಿದ್ದ ವಿಮರ್ಶಕರು ಕವಿಗಳಾಗಬಲ್ಲರು. ಕವಿಗಳು ವಿಮರ್ಶಕರಾಗಬಲ್ಲರು. ಇಂದಿನ ಉತ್ತಮ ಸಾಹಿತ್ಯದಲ್ಲಿ ಕಂಡುಬರುವ ಈ ಕವಿ ವಿಮರ್ಶಕ ಸಿದ್ಧಿಯ ಪರಂಪರೆ ಕನ್ನಡದಲ್ಲಿ ಹೆಚ್ಚಾಗಿ ಬೆಳಗಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.