ಇಕಿಗಾಯ್ ಹದಿಹರೆಯದವರಿಗಾಗಿ / Ikigai Hadihareyadavarigagi

Author: Hector Garcia

Pages:138

Edition: 2025

Book Size: 1/8th Demmy

Binding: Paper Back

Publisher: Wow Publication

Specification

Original price was: ₹175.Current price is: ₹157.

In stock

Description

ಇಕಿಗಾಯ್ ಹದಿಹರೆಯದವರಿಗಾಗಿ / Ikigay Hadihareyadavarigagi -ಪ್ರತಿದಿನದ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವ ಜಪಾನೀ ಪರಿಕಲ್ಪನೆಯ ಆಧಾರಿತ, ಅತೀ ಹೆಚ್ಚು ಮಾರಾಟವಾಗಿರುವ ಪ್ರೇರಣಾದಾಯಕ ಪುಸ್ತಕ ಈಗ ಯುವ ಓದುಗರಿಗಾಗಿ! ಪ್ರತಿಯೊಬ್ಬರಿಗೂ ಒಂದು ‘ಇಕಿಗಾಯ್’ ಅಥವಾ ಬದುಕಲು ಕಾರಣವಿದೆ ಎಂದು ಜಪಾನೀಯರು ನಂಬುತ್ತಾರೆ. ಕೆಲವರು ತಮ್ಮ ಇಕಿಗಾಯ್ ಅನ್ನು ಕಂಡುಕೊAಡಿದ್ದಾರೆ ಮತ್ತು ಅವರಿಗೆ ಅದರ ಅರಿವಿದೆ. ಇನ್ನೂ ಕೆಲವರಿಗೆ ಅದು ಅವರೊಳಗೇ ಇದೆ, ಆದರೆ ಇನ್ನೂ ಅವರು ಅದನ್ನು ಕಂಡುಕೊAಡಿಲ್ಲ. ಈ ಇಕಿಗಾಯ್ ಸಿದ್ಧಾಂತವು ದೀರ್ಘವಾದ, ಸಕ್ರಿಯ ಮತ್ತು ಸಂತೋಷಕರ ಬದುಕಿನ ರಹಸ್ಯಗಳಲ್ಲಿ ಒಂದು. ವಿಶ್ವದಲ್ಲೇ ಅತ್ಯಂತ ದೀರ್ಘಾಯುಷಿ ಜನರನ್ನು ಹೊಂದಿರುವ, ಜಪಾನ್‌ನ ‘ಓಕಿನಾವಾ’ದ ಉತ್ತರದಲ್ಲಿರುವ ‘ಒಗಿಮಿ’ ಪಟ್ಟಣಕ್ಕೆ ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸಿಸ್ಕ್ ಮಿರಾಯೆಸ್ ಭೇಟಿ ನೀಡಿದರು. ಅವರು ಒಗಿಮಿ ನಿವಾಸಿಗಳೊಂದಿಗೆ ಹಲವಾರು ವಾರಗಳ ಕಾಲ ವಾಸವಾಗಿದ್ದು, ಡಜನ್‌ಗಟ್ಟಲೆ ಗ್ರಾಮಸ್ಥರನ್ನು ಸಂದರ್ಶನ ಮಾಡಿದರು. ಈ ಎಲ್ಲಾ ಜನರೂ ನೂರಕ್ಕೂ ಅಧಿಕ ವರ್ಷಗಳ ಕಾಲ ಬದುಕಿದವರಾಗಿದ್ದು, ಶಾರೀರಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರು. ನೂರಾರು ವರ್ಷ ಬದುಕಿದವರ ಆಶಾವಾದ ಮತ್ತು ಜೀವಂತಿಕೆಯ ಕಾರಣಗಳನ್ನು ಪರಿಶೀಲಿಸಿ ಹೆಕ್ಟರ್ ಮತ್ತು ಫ್ರಾನ್ಸಿಸ್ಕ್ ತಮ್ಮ ಪ್ರವಾಸದ ನಂತರ, ಜಗತ್ತಿನಲ್ಲೇ ಅತ್ಯಂತ ದೀರ್ಘಾಯುಷಿಗಳು ಎಂತಹ ಆಹಾರ ಸೇವಿಸುತ್ತಾರೆ, ಏನು ಕೆಲಸ ಮಾಡುತ್ತಾರೆ, ಇತರರೊಂದಿಗೆ ಹೇಗೆ ಸಂಪರ್ಕದಲ್ಲಿ ಇರುತ್ತಾರೆ ಮತ್ತು ಒಂದು ಅತ್ಯುತ್ತಮ ರಹಸ್ಯ- ತಮ್ಮ ಇಕಿಗಾಯ್‌ನ್ನು ಅವರು ಹೇಗೆ ಕಂಡುಕೊಳ್ಳುತ್ತಾರೆ ಎಂಬುದರ ಬಗ್ಗೆ ಒಂದು ಪುಸ್ತಕವನ್ನು ಬರೆದರು. ಅವರಿಗೆ ತೃಪ್ತಿ ಮತ್ತು ಸಂತೋಷವನ್ನು ನೀಡಿ, ಅವರ ಜೀವನಕ್ಕೆ ನಿಜವಾದ ಅರ್ಥವನ್ನು ಕೊಡುವುದೇ ಇಕಿಗಾಯ್. ಇದರ ಫಲಿತಾಂಶವೇ ೪೯ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿರುವ, ವಿಶ್ವದಲ್ಲೇ ಅತ್ಯಧಿಕ ಮಾರಾಟವಾದ ‘ಇಕಿಗಾಯ್: ದ ಜಪಾನೀಸ್ ಸೀಕ್ರೆಟ್ ಟು ಎ ಲಾಂಗ್ ಅಂಡ್ ಹ್ಯಾಪಿ ಲೈಫ್’ ಎನ್ನುವ ಪುಸ್ತಕ. ಗಾರ್ಸಿಯಾ ಮತ್ತು ಮಿರಾಯೆಸ್ ಅವರು ಈ ಪುಸ್ತಕದ ಮೂಲಕ ತಮ್ಮ ಓದುಗರಿಗೆ ಅವರದೇ ಆದ ಇಕಿಗಾಯ್‌ನ್ನು ಕಂಡುಕೊಳ್ಳಲು ಮತ್ತು ಆರೋಗ್ಯಕರ ದೇಹ, ಮನಸ್ಸು ಮತ್ತು ಆತ್ಮಕ್ಕೆ ಸಂಬAಧಿಸಿದ ಅನೇಕ ಜಪಾನೀ ತತ್ವ್ವಗಳನ್ನು ಅನ್ವೇಷಿಸಲು ಸಹಾಯ ಮಾಡುವುದನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ. ಈಗ ಅವರು ತಮ್ಮ ಅತ್ಯಧಿಕವಾಗಿ ಮಾರಾಟವಾದ ಪುಸ್ತಕವನ್ನು ಯುವ ಓದುಗರಿಗಾಗಿ ಅಳವಡಿಸಿಕೊಟ್ಟಿದ್ದಾರೆ. ಈಗ ಯುವವಯಸ್ಕರೂ ತಮ್ಮ ಇಕಿಗಾಯ್‌ನ್ನು ಕಂಡುಕೊಳ್ಳಬಹುದು!