ಎಚ್ಚೆಸ್ವಿ ಕಾವ್ಯ ಸಾತತ್ಯ / HSV Kavya Saatathya
Author: H.S. Venkatesha Murthy
Pages: 164
Edition: 2019
Book Size: 1/8th Demmy
Binding: Paper Back
Publisher: Chintana Chittara
Description
ಎಚ್ಚೆಸ್ವಿ ಕಾವ್ಯ ಸಾತತ್ಯ / HSV Kaavya Saatathya – ಲೇಖಕ-ವಿಮರ್ಶಕ ಎಸ್. ಆರ್ ವಿಜಯಶಂಕರ ಅವರ ವಿಮರ್ಶಾ ಬರಹಗಳಿರುವ ಕೃತಿ-ಎಚ್ಚ್‌ಸ್ವಿ ಕಾವ್ಯ ಸಾತತ್ಯʼ ಡಾ. ಎಚ್. ಎಸ್ ಮೂರ್ತಿಯವರ ಸಾಹಿತ್ಯದ ವಿಮರ್ಶೆ -ಒಳನೋಟಗಳನ್ನು ಒಳಗೊಂಡಿದೆ. ಖ್ಯಾತ ವಿಮರ್ಶಕ ಎಚ್. ದಂಡಪ್ಪಅವರು ಕೃತಿಗೆ ಬೆನ್ನುಡಿ ಬರೆದು ‘ ಮೂರ್ತಿಯವರು ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಕನ್ನಡ ಜನಮಾನಸ ಅವರನ್ನು ಮೊದಲಿಗೆ ಕವಿ ಎಂದೇ ಗುರುತಿಸುತ್ತಾರೆ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಸತತವಾಗಿ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆ. ವಿಮರ್ಶಕರು ಅವರ ಕಾವ್ಯಗಳ ಬಗ್ಗೆ ಬರೆದಿದ್ದಾರೆ. ಅವರ ಹಾಡುಗಳನ್ನು ಸುಗಮ ಸಂಗೀತಗಾರರೂ ಹಾಡುತ್ತಲೇ ಇದ್ದಾರೆ. ಕಳೆದ ಹಲವು ವರ್ಷಗಳಲ್ಲಿ ವಿಜಯಶಂಕರ ಅವರು ಎಚ್ಚೆಸ್ವಿ ಬಗ್ಗೆ ಬರೆದ ಬರಹಗಳಿಂದ ಅವರ ಕಾವ್ಯದ ಬಗೆಗೆ ಇರುವ ಲೇಖನಗಳನ್ನು ʼ ಎಚ್ಚೆಸ್ವಿ ಕಾವ್ಯ ಸಾತತ್ಯʼ ವಿಮರ್ಶಾ ಸಂಗ್ರಹದಲ್ಲಿ ನೀಡಲಾಗಿದ್ದು, ಹಾಗೆಯೇ ಈ ಸಂಕಲನಕ್ಕಾಗಿ ಬರೆದ ಲೇಖನಗಳೂ ಇಲ್ಲಿವೆ. ಕಾವ್ಯ ಪ್ರೀತಿಯ ವಿಮರ್ಶಕರೊಬ್ಬರು ನಮ್ಮ ಕಾಲದ ಮುಖ್ಯ ಕವಿಯೊಬ್ಬರ ಬಗೆಗೆ ಬರೆದ ಇಲ್ಲಿನ ಬರಹಗಳು ಕವಿ ಕಾವ್ಯಗಳ ಕುರಿತಾಗಿ ಹೊಸ ವಿಮರ್ಶೆ, ವಿಶ್ಲೇಷಣೆಗಳ ಬೆಳಕು ಚೆಲ್ಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
