ಎದೆಗೆ ಬಿದ್ದ ಅಕ್ಷರ / Edege Bidda Akshara
Author: Devanura Mahadeva
Pages:320
Edition: 2025
Book Size: 1/8th Demmy
Binding: Paper Back
Publisher:Abhinava Prakashana
Specification
Description
ಎದೆಗೆ ಬಿದ್ದ ಅಕ್ಷರ / Edege Bidda Akshara – ದೇವನೂರು ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” (Edege Bidda Akshara) ಎಂಬುದು ಅವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಿಂತನೆಗಳು, ಪ್ರತಿಕ್ರಿಯೆಗಳು, ಭಾಷಣಗಳು, ಮತ್ತು ಲೇಖನಗಳನ್ನೊಳಗೊಂಡ ಒಂದು ಮಹತ್ವದ ಸಂಕಲನ ಕೃತಿ. ಇದು ಕಾದಂಬರಿಯಲ್ಲ, ಬದಲಿಗೆ ವಿವಿಧ ಸಂದರ್ಭಗಳಲ್ಲಿ ಬರೆದ ಮತ್ತು ಮಾತನಾಡಿದ ಬರಹಗಳ ಸಂಗ್ರಹವಾಗಿದೆ. ದೇವನೂರು ಮಹಾದೇವ ಕನ್ನಡ ಸಾಹಿತ್ಯ ಲೋಕದಲ್ಲಿನ ಸೂಕ್ಷ್ಮ ಬರಹಗಾರ, ಹೋರಾಟಗಾರ. ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಗೊಂಡಿರುವ ಇವರು ’ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಕರ್ತೃ. ನಿರಂತರ ಓದು, ಕ್ರಿಯೆಗಳ ಮೂಲಕ ಅರಿವನ್ನು ಬೆಳೆಸಿಕೊಳ್ಳಲು ಪೂರಕವಾಗಿರುವ ,ಸಮಾಜವಾದಿ ಚಿಂತನೆಯ ಈ ಕಾಲದ ಹೊಸ ಮಾದರಿಯಂತೆ ಮಹತ್ವದ ಸಾಂಸ್ಕೃತಿಕ ಪಠ್ಯವಾಗಿದೆ. ದೇವನೂರರ ಪ್ರತಿಕ್ರಿಯೆಗಳು, ಭಾಷಣಗಳು, ಸಾಹಿತ್ಯಕ ನಿಲುವುಗಳು, ಚಳುವಳಿಗಳಿಗೆ ಸಲಹೆಗಳು, ಮಾನವ ವರ್ತನೆಯ ವಿಶ್ಲೇಷಣೆ, ವಿಕೇಂದ್ರೀಕರಣ, ಅಂತರಾಷ್ಟ್ರೀಯ ಘಟನೆಗಳು, ಕೃಷಿ, ಹೆಣ್ಣು, ಜಾತಿ, ಕಥನದ ಚಿಂತನೆಗಳು, ರಾಜಕೀಯ ನಿಲುವು, ಅರಿವಿನ ನುಡಿ, ಇವೆಲ್ಲವನ್ನೂ ಒಳಗೊಂಡ ಬರಹಗಳು ,ಪ್ರಗತಿಪರ ಚಿಂತನೆಗಳು ನಿರಂತರವಾಗಿ ಕಂಡುಕೊಳ್ಳಬೇಕಾದ ಅರಿವಿನ ದಾರಿ ಎದೆಗೆ ಬಿದ್ದ ಅಕ್ಷರದಲ್ಲಿ ಸಿಗುವ ಮುಖ್ಯ ಅಧ್ಯಯನದ ವಸ್ತುಗಳು.’ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಇಂದಲ್ಲ ನಾಳೆ ಫಲ ಕೊಡುವುದು’ ಎನ್ನುವ ದೇವನೂರು ಮಹಾದೇವರ ಮನೋಧೋರಣೆ ಪಠ್ಯದುದ್ದಕ್ಕೂ ಇರುವಂತದ್ದು.
