ಎಪ್ಪತ್ತರ ದಶಕದ ಕಥೆ / Yeppattara Dashakada Kathe
Author: Dr.U.R.Ananthamurthy
Pages:72
Edition: 2018
Book Size: 1/8th Demmy
Binding: Paper Back
Publisher: Abhinava Prakashana
Description
ಎಪ್ಪತ್ತರ ದಶಕದ ಕಥೆ / Yeppattara Dashakada Kathe -ಎಪ್ಪತ್ತರ ದಶಕದ ಕನಸುಗಳು, ಪ್ರಜಾತಂತ್ರದ ವೈಫಲ್ಯ, ಪುನಸ್ಸೇತನ ಇವೆಲ್ಲವನ್ನೂ ಒಳನೋಟದಿಂದ ನೋಡಬೇಕೆಂಬ ಲೇಖಕನ ಆಸೆಗಳು ಈ ಕಥೆಗಳಲ್ಲಿವೆ. ಯಾಕೆಂದರೆ ಈ ದಶಕ ನಾವು ಕನಸುಗಳನ್ನು ಕಂಡ ಕಾಲ, ಕನಸುಗಳು ಭವಾದ ಕಾಲ, ಕ್ರಾಂತಿಕಾರರೆಂದು ಭಾವಿಸಿಕೊಂಡ ಮಧ್ಯಮವರ್ಗ ಬ್ಯಾಡ್ ಫೈಟ್ ನಲ್ಲಿ ಬದುಕಿದ ಕಾಲ. ಈ ಬ್ಯಾಡ್‌ಫೈಟ್ ಲೇಖಕನೊಬ್ಬ ತನ್ನ ಹೊರಗೆ ಕಾಣುತ್ತಿರುವುದು ಮಾತ್ರವಲ್ಲ; ತನ್ನ ಒಳಗೂ ಕಾಣುತ್ತಿರುವುದು. ಗಾಂಧಿಯವರ ಮಾರ್ಗವನ್ನು ಪುನಚೇತನಗೊಳಿಸಲು ಜಯಪ್ರಕಾಶ ನಾರಾಯಣರು ವಿಫಲರಾದರು. ರಾಜಕಾರಣದ ಜಾಗವನ್ನು ಪುಂಡುಪೋಕರಿಗಳು ಆಕ್ರಮಿಸಿದರು. ಸ್ವಜಾತಿಯ ಹೆಸರಲ್ಲೇ ಜಾತಿಯ ಕ್ರಾಂತಿಯನ್ನು ಮಾಡಿದರು. ‘ಎಪ್ಪತ್ತರ ದಶಕದ ಕಥೆ’ ಆ ದಶಕದ ವಿದ್ಯಮಾನಗಳನ್ನು ವ್ಯಕ್ತಿಗಳ ಖಾಸಗಿ ಬದುಕಿನ ಆಕಾಂಕ್ಷೆಗಳು ಮತ್ತು ತುಮುಲಗಳ ಮೂಲಕ ಗ್ರಹಿಸುವ ಪ್ರಯತ್ನ ಮಾಡುತ್ತದೆ. ಅನಂತಮೂರ್ತಿಯವರು ವಿಡಂಬನಾತ್ಮಕವಾಗಿ ಬಳಸುವ ಎಡಪಂಥೀಯ ತಾತ್ವಿಕ ಭಾಷೆ ಪಾತ್ರಗಳ ಗ್ರಹಿಕೆ-ತಿಳುವಳಿಕೆಗಳು ಎಷ್ಟು ಸವಕಲಾಗಿದೆ ಎಂಬುದನ್ನು ತೋರಿಸುವುದರ ಜೊತೆಗೆ, ಅದೇ ಆತ್ಮವಂಚನೆಯ ದಾರಿಯಾಗಿಯೂ ಪರಿಣಮಿಸುತ್ತದೆ ಎನ್ನುವುದನ್ನು ವಿಶದಪಡಿಸುತ್ತದೆ.
