ಎ.ಕೆ. ರಾಮಾನುಜನ್ ಆಯ್ದ ಪ್ರಬಂಧಗಳು / A.K. Ramanujan Aayda Prabandhagalu
Author: O.L. Naghabhushanaswamy
Pages: 350
Edition: 2012
Book Size: 1/8th Demmy
Binding: Paper Back
Publisher: Manohara Grantha Mala
Description
ಎ.ಕೆ. ರಾಮಾನುಜನ್ ಆಯ್ದ ಪ್ರಬಂಧಗಳು / A.K. Ramanujan Aayda Prabandhagalu – ಖ್ಯಾತ ಸಾಹಿತಿ ಡಾ. ಎ.ಕೆ. ರಾಮಾನುಜನ್ ಅವರ ಆಯ್ದ ಇಂಗ್ಲಿಷ್ ಪ್ರಬಂಧಗಳನ್ನು ಡಾ. ಓ.ಎಲ್. ನಾಗಭೂಷಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಳ್ಳುವುದೇ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಧಾನ. ಸಾಹಿತ್ಯಚಿಂತನೆ, ಕ್ಲಾಸಿಕಲ್ ಸಾಹಿತ್ಯ, ಜಾನಪದ, ಹೆಣ್ಣು ಭಾಷೆ ಮತ್ತು ನಿರೂಪಣೆಯ ಲಕ್ಷಣ, ಅನುವಾದ, ಸಂಸ್ಕೃತಿ ವಿಚಾರ, ತೌಲನಿಕ ಅಧ್ಯಯನ ಈ ಎಲ್ಲ ವಲಯಗಳಿಗೆ ರಾಮಾನುಜನ್ ಅವರ ಕೊಡುಗೆ ಮುಖ್ಯವಾದದ್ದು. ಸಹಾನುಭೂತಿ ಮತ್ತು ವಿಮರ್ಶಾತ್ಮಕ ಅಂತರಗಳನ್ನಿಟ್ಟುಕೊಂಡು ನಮ್ಮನ್ನು ನಾವು ಇರುವಂತೆ ಲೋಕಕ್ಕೆ ಕಾಣಿಸುವ ಮತ್ತು ನಾವು ಲೋಕದ ದೃಷ್ಟಿಗೆ ಹೇಗೆ ಕಾಣಬಹುದೆಂಬುದನ್ನು ತೋರಿಸಿಕೊಡುವ ಎರಡೂ ಅಪರೂಪದ ಕೆಲಸಗಳನ್ನು ರಾಮಾನುಜನ್ ಬರವಣಿಗೆ ಮಾಡುತ್ತದೆ. ಈ ನಿಟ್ಟಿನಲ್ಲಿ ಕೃತಿಯಲ್ಲಿಯ ಪ್ರಬಂಧಗಳು ತನ್ನ ಸಾಹಿತ್ಯಕ ಗುಣಗಳಿಂದಾಗಿ ಪರಿಣಾಮಕಾರಿಯಾಗಿವೆ.
