ಅನ್ವೇಷಣೆ / Anweshane
ಅನ್ವೇಷಣೆ / Anweshane Original price was: ₹260.Current price is: ₹234.
Back to products
ಕವಲು / Kavalu
ಕವಲು / Kavalu Original price was: ₹380.Current price is: ₹342.

ಒಂಟಿ ದನಿ / Onti Dani

Author: Dr.K. Shivarama Karantha

Pages: 287

Edition: 2014

Book Size: 1/8th Demmy

Binding: Paper Back

Publisher: Sapna Book House

Specification

Original price was: ₹140.Current price is: ₹126.

In stock

Description

ಒಂಟಿ ದನಿ / Onti Dani – ಒಂಟಿ ದನಿ-ಡಾ. ಕೆ. ಶಿವರಾಮ ಕಾರಂತರ ಕಾದಂಬರಿ. ವ್ಯಕ್ತಿಗಳ ಒಳ-ಹೊರಗುಗಳಲ್ಲಿರುವ ಅಂತರವನ್ನು ಬಿಂಬಿಸುವ ಕಾದಂಬರಿ. ವಿವಿಧ ಕ್ಷೇತ್ರಗಳಲ್ಲಿ ದುಡಿಯುವಾಗ; ಪ್ರಾಮಾಣಿಕವಾಗಿ ತಮಗೆ ಅನಿಸಿದ್ದನ್ನು ಇತರರಿಗೆ ಬರಹ ಇಲ್ಲವೇ ನೃತ್ಯ, ಸಂಗೀತಗಳ ಮೂಲಕವಾಗಲಿ ತಿಳಿಯಪಡಿಸಬೇಕೆನ್ನುವ ಬಯಕೆಗಿಂತ “ಲೋಕ ತನ್ನನ್ನು ಕಾಣಬೇಕು: ಕೇಳಬೇಕು’ ಎಂಬ ಪ್ರಚಾರಪ್ರಿಯತೆಯೇ ಕಾದಂಬರಿಯ ಹಲವಾರು ಮುಖ್ಯ ಪಾತ್ರಗಳ ಧ್ಯೇಯ-ಧೋರಣೆಗಳಾಗಿರುತ್ತವೆ. ಬದುಕಿಗೂ, ಜೀವನಕ್ಕೂ ಪರಸ್ಪರ ಸಂಬಂಧಗಳಿಲ್ಲದ ಹಲವಾರು ಬಗೆಯ ಇಂತಹ ಮುಖವಾಡಗಳನ್ನು ತೊಟ್ಟ ಜನರ ಸಂತೆಯಲ್ಲಿ ‘ಲೋನ್ ವಾಯ್ಸ್’ ಪತ್ರಿಕೆಯಲ್ಲಿ ತನ್ನ ಅನುಭವಗಳನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಬರೆಯುತ್ತಿದ್ದ ಜಗನ್ನಾಥರಾಯನೊಬ್ಬನೇ ಭಿನ್ನ ವ್ಯಕ್ತಿ. ತನ್ನ ತಾಯಿ, ತಂಗಿ ಮತ್ತು ಅವಳ ಮಕ್ಕಳ ಸಂಸಾರಕ್ಕೆ ನೆರವಾಗುವ ಉದ್ದೇಶದಿಂದ ತನ್ನ ಅಲ್ಪ ವೇತನವನ್ನು ಅವರಿಗಾಗಿ ವ್ಯಯಿಸಿ, ಮದುವೆಯಾಗದೇ ಹೋದರೂ, ಪ್ರಾಮಾಣಿಕವಾಗಿ, ಶುದ್ಧ ಚಾರಿತ್ಯ್ರದಿಂದ ಬದುಕನ್ನು ಸಾಗಿಸುತ್ತಿದ್ದ ವ್ಯಕ್ತಿ ಜಗನ್ನಾಥರಾಯ, ಹಲವು ಜನರ ಗದ್ದಲಗಳ ನಡುವೆ ತನ್ನ ದನಿ ‘ಒ೦ಟದನಿ’ ಎಂಬ ಪರಿವೆ ಇದ್ದರೂ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆಯವರೆಗೂ ಬಾಳಿದ ವ್ಯಕ್ತಿ. “ಉಸಿರು ಕಡಿಮೆಯಾದರೆ ಹೃದಯವೇ ನಿಲ್ಲುತ್ತದೆ. ದೇಹ ಸಾಯುತ್ತದೆ. ಪತ್ರಿಕೆ ಸಾಯುವುದು ಹೆಚ್ಚೇ ? ನಾವೇ ಸಾಯುವುದಿಲ್ಲವೆ ? ಆದರೆ, ನನ್ನಂತೆ ಸ್ವಂತ ದನಿಯುಳ್ಳವರು ಎಷ್ಟೋ ಜನರಿರಬಹುದು.