Back to products
ಅಂತಕರಣದ ಕುಬೇರ / Antahkaranada Kubera
ಅಂತಕರಣದ ಕುಬೇರ / Antahkaranada Kubera Original price was: ₹80.Current price is: ₹72.

ಒಲವೇ ವಿಸ್ಮಯ / Olave Vismaya

Author: Gayathriraj

Pages: 152

Edition: 2024

Book Size: 1/8th Demmy

Binding: Paper Back

Publisher: Sahithyaloka Publications

Original price was: ₹195.Current price is: ₹175.

In stock

Description

ಒಲವೇ ವಿಸ್ಮಯ / Olave Vismaya – ಅವಳೊಂದು ಭಾವವಾ, ಒಲವಾ..? ಎನ್ನಿಸಿಬಿಡುವಂತೆ ಪ್ರೀತಿಯ ಹರಿವನ್ನು ಸರಾಗವಾಗಿ ಲಹರಿಯಾಗಿಸಿರುವ ಗಾಯತ್ರಿ ರಾಜ್, ಇದನ್ನು ಬರೆದಿಲ್ಲ ಅನುಭವಿಸಿದ್ದಾರೆ. ಅನುಭೂತಿ ಮತ್ತು ಸಾಹಿತ್ಯಗಳನ್ನು ಸಂಕರಗೊಳಿಸಬಹುದಾದ ಸಾಧ್ಯತೆಯನ್ನೇ ಲಹ- ರಿಯಾಗಿಸುವ ಮೂಲಕ ಭಾವಾನುಸಂಧಾನಗೊಳಿಸುವ ಲೇಖಕಿ, ಇವೆಲ್ಲ ಓದುಗ ತನ್ನದೇ ಬದುಕಿನ ಅನುಭವ ಎನ್ನಿಸುವಂತೆ ಚಿತ್ರಿಸಿದ್ದಾರೆ. ಅಷ್ಟೇ ವಾಸ್ತವ ಈ ಲಹರಿಗಳು. ಸಂಕೀರ್ಣ ಸಮಯಗಳ ಅನುಭವಕ್ಕೆ ಹೋಲಿಕೆಗೊಳಪಡಿಸುವಂತೆ ಪ್ರಸ್ತುತಪಡಿಸುವುದು ಮತ್ತು ಹಾಗೆ ನಂಬಿಸುವಂತೆ ಬರೆಯುವುದು ಗಾಯತ್ರಿಯ ವಿಶೇಷತೆ ಪೂರ್ವಾಪರ ಇಲ್ಲದ, ಉತ್ತರೋತ್ತರ ಚಿಂತನೆಗೆ ಎಳೆಸದ, ಆದರೆ ವಾಸ್ತವದಲ್ಲಿ ಇದೆಲ್ಲ ನನ್ನದಾಗಬಾರದಿತ್ತಾ ಎನ್ನಿಸುವಂತಹ ಪ್ರೇಮ ಕತೆಗಳು ಇಲ್ಲಿವೆ. ಬಗೆದಷ್ಟೂ ಹೊಸ ಹೊಸ ಆಯಾಮಗಳ ಮೂರ್ತರೂಪ ಕಟ್ಟಿಕೊಡುವಲ್ಲಿ ಶ್ರಮಿಸಿರುವ ಲೇಖಕಿ, ಅಲ್ಲಲ್ಲಿ ನಿರೂಪಣೆ ಬದಲಾಗಿ ಸ್ವತಃ ರಂಗಕ್ಕಿಳಿದಂತೆ ಅಕ್ಷರ ಕೆತ್ತಿದ್ದು ವಿಶೇಷತೆ.