ಕಂಡಕ್ಟರ್ ಕವಿತೆಗಳು / Conductor Kavitegalu
Author: Sadashiva Soratur
Pages: 100
Edition: 2023
Book Size: 1/8th Demmy
Binding: Paper Back
Publisher: Bahuroopi
Description
ಕಂಡಕ್ಟರ್ ಕವಿತೆಗಳು / Conductor Kavitegalu – ‘ಕಂಡಕ್ಟರ್ ಕವಿತೆಗಳು’ ಸದಾಶಿವ ಸೊರಟೂರ್ ಅವರ ಕವಿತೆಗಳ ಸಂಕಲನ. ಬಹುರೂಪಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಗೆ ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಒಂದು ಬಸ್ ಟಿಕೆಟ್‌ನ ಹಿಂದೆ.. ನಿನ್ನ ಆತ್ಮಚರಿತ್ರೆಯೇನು ಬಿಡು ಒಂದು ರೆವಿನ್ಯೂ ಸ್ಟ್ಯಾಂಪ್‌ನ ಹಿಂದೆ ಬರೆದು ಮುಗಿಸಬಹುದು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತೆ ಅಮೃತಾ ಪ್ರೀತಂರನ್ನು ಗೇಲಿ ಮಾಡಿದ್ದರು. ಆಕೆಯೋ Revenue Stamp ಎಂದು ಹೆಸರಿಟ್ಟೆ ತಮ್ಮ ಆತ್ಮ ಚರಿತ್ರೆ ಹೊರತಂದಿದ್ದರು. ಅಂತೆಯೇ ಕಂಡಕ್ಟರ್‌ಗಳ ಬದುಕೇನು ಬಿಡು ಒಂದು ಬಸ್ ಟಿಕೆಟ್ ಹಿಂದೆ ಬರೆದು ಮುಗಿಸಬಹುದು ಎಂದು ನೀವು ಅಂದುಕೊಂಡಿದ್ದರೆ ಅದು ಖಂಡಿತಾ ತಪ್ಪು ಎನ್ನುವುದನ್ನು ಯುವ ಬರಹಗಾರ ಸದಾಶಿವ ಸೊರಟೂರು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಬಸ್‌ನಲ್ಲಿ ದಿನನಿತ್ಯ ಪಯಣಿಸುವ ಸೊರಟೂರು ಕಂಡಕ್ಟರ್‌ಗಳ ಅಂತರಂಗದೊಳಗೆ ಹೊಕ್ಕು ಈ ಸಾಲುಗಳನ್ನು ಹೆಕ್ಕಿ ತಂದಿದ್ದಾರೆ. ಇವು ಕಂಡಕ್ಟರ್ ‘ಜೆನ್’ ಎಂದಿದ್ದಾರೆ ಜಿ. ಎನ್. ಮೋಹನ್
