Back to products
ಕಿಲುಬು / Kilubu
ಕಿಲುಬು / Kilubu Original price was: ₹200.Current price is: ₹180.

ಕತ್ತೆಗೊಂದು ಕಾಲ / Kattegondu Kaala

Author: Kum.Verabhadrappa

Pages:340

Edition: 2018

Book Size: 1/8th Demmy

Binding: Paper Back

Publisher: Sapna Book House

Original price was: ₹300.Current price is: ₹270.

In stock

Description

ಕತ್ತೆಗೊಂದು ಕಾಲ / Kattegondu Kaala –  ಕುಂ. ವೀರಭದ್ರಪ್ಪನವರ ರಾಜಕೀಯ ವಿಡಂಬನಾತ್ಮಕ ಕಾದಂಬರಿ. ಚುನಾವಣೆ, ರಾಜಕೀಯ, ಧರ್ಮ ಹೀಗೆ ವರ್ತಮಾನದ ಬದುಕು-ಬದಲಾವಣೆಗಳನ್ನು ಕುಂ.ವೀ. ಅವರು ವ್ಯಂಗ್ಯವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಅದರ ಒಂದು ಮಾಸಲು ಇಲ್ಲಿದೆ. “ವಿಶ್ವಸುಂದರಿ ಲಾಸಿಕೆ ಅಂದಾನಿ ಗ್ರೂಪ್ ಆಫ್ ಕಂಪನಿಯ ಗಾರ್ದಭೋತ್ಪಾದನೆಗಳ ರೂಪದರ್ಶಿ ಕಂ ರಾಯಭಾರಿಯಾದರೆ ಈ. ಶ್ರೀಗಾರ್ದಭೇಶ್ವರರು ಜಂಭೂದ್ವೀಪದಂಬ ಕಂಪನಿಯ ಅಂತರಾಷ್ಟ್ರೀಯ ಮಾರುಕಟ್ಟೆಯ ರಾಯಭಾರಿಗಳು. ಲೌಕಿಕ ಜಗತ್ತಿಗೆ ವಿಶ್ವಸುಂದರಿ ಎಷ್ಟು ಮುಖ್ಯವೋ ಆಲೌಕಿಕ ಜಗತ್ತಿಗೆ ಈ ಚತುಷ್ಪಾದಾಳಾವೈನೋದಿಗಳು ಸಹ ಅಷ್ಟೇ ಮುಖ್ಯ. ಈ ಎರಡು ಪರಿಕಲ್ಪನೆಗಳು ಮಾರುಕಟ್ಟೆಯ ಎರಡು ಮುಖಗಳು. ಚುನಾವಣೆ ಹೊಸ್ತಿಲಲ್ಲಿದ್ದಾಗ ಅಂದಾನಿ ಕಂಪನಿಯ ಪ್ರಮಾದ್‌ಗೆ ಹೇಳಿ ಹಾಲಾಹಲ್ ಮೂಲಕ ಈ ಶ್ರೀಗಳನ್ನು ಆಹಿಂಸಾತ್ಮಕ ರೀತಿಯಲ್ಲಿ ಅಪಹರಣವಾಗುವಂತೆ ಸನ್ನಿವೇಶ ಸೃಷ್ಟಿಸಿದರೆ ಹೇಗೆ? ಮತದಾನ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಅದೇ ಪ್ರಮಾದ್‌ನ ಸಹಾಯದಿಂದ ಹಾಲಾಹಲ್‌ನನ್ನು ಬಂಧಿಸಿ, ನಕಲಿ ಎನ್ಕೌಂಟರ್ ನಲ್ಲಿ ಕೊಂದು ಬಂಧನದಿಂದ ಶ್ರೀಗಳನ್ನು ಬಿಡುಗಡೆಗೊಳಿಸಿದರೆ ಹೇಗೇ! ಹೀಗೆ ಮಾಡಿದಲ್ಲಿ ತಾವು ತಮ್ಮ ಪಕ್ಷವೂ ಮತಗಳನ್ನು ಕೊಳ್ಳೆ ಹೊಡೆದು ಜಯಭೇರಿ ಭಾರಿಸುವುದರಲ್ಲಿ ಅನುಮಾನವಿಲ್ಲ, ವಿರೋಧಪಕ್ಷಗಳ ಮೀಸೆ ಮಣ್ಣಾಗುವುದರಲ್ಲಿ ಅನುಮಾನವಿಲ್ಲ.”