ಕನ್ನಡ ಸಾಹಿತ್ಯ ಸಂಗಾತಿ / Kannada Sahitya Sangati
Author: Kirthinath D. Kurtkoti
Pages: 396
Edition: 2022
Book Size: 1/8th Demmy
Binding: Paper Back
Publisher: Manohara Grantha Mala
Description
ಕನ್ನಡ ಸಾಹಿತ್ಯ ಸಂಗಾತಿ / Kannada Sahithya Sangaati – ಕೀರ್ತಿನಾಥ ಕುರ್ತಕೋಟಿ ಅವರ “ಕನ್ನಡ ಸಾಹಿತ್ಯ ಸಂಗಾತಿ” ಹಳಗನ್ನಡ ಸಾಹಿತ್ಯವನ್ನು ಪರಿಚಯಿಸುವ ಮತ್ತು ವಿಶ್ಲೇಷಿಸುವ ಒಂದು ಪ್ರಮುಖ ವಿಮರ್ಶಾ ಕೃತಿಯಾಗಿದೆ. ಕ್ರಿ.ಶ. 1700ರ ನಂತರದ ಕಾವ್ಯ-ನಾಟಕ ವಿಮರ್ಶೆ ಹಳಗನ್ನಡದ ಕವಿಗಳು ಮತ್ತವರ ಕೃತಿಗಳ ಬಗ್ಗೆ ಈ ಗ್ರಂಥದಲ್ಲಿ ಅಪೂರ್ವ ಒಳನೋಟಗಳಿವೆ. ಕನ್ನಡದ ಪ್ರಥಮ ಶಾಸನವಾದ ‘ಹಲ್ಮಡಿ ಶಾಸನ’ ಹಾಗು ಕನ್ನಡದಲ್ಲಿ ಮೊದಲು ಉಪಲಬ್ಧವಾಗಿರುವ ನೃಪತುಂಗನ ‘ಕವಿರಾಜಮಾರ್ಗ’ದಿಂದ ಹಿಡಿದು ಶಾಂತಕವಿ, ಮುದ್ದಣ್ಣನ ಕಾವ್ಯಕೃತಿವರೆಗಿನ ವಿಮರ್ಶಾತ್ಮಕ ಬರಹಗಳು ಈ ಕೃತಿಯಲ್ಲಿದೆ. ಈ ಕೃತಿ ಹೊಂದಿರುವ ಅಧ್ಯಾಯಗಳು ಹೀಗಿವೆ: ಹಿಡಿ ಶಾಸನ , ಕವಿರಾಜಮಾರ್ಗ , ಮಾರ್ಗ ಮತ್ತು ದೇಸಿ ,ವಡ್ಡರಾಧನೆ , ಹಳೆಗನ್ನಡ ಕವಿ-ಕಾವ್ಯ ವಿಮರ್ಶೆ , ವಚನ ಸಾಹಿತ್ಯ ವಿಮರ್ಶೆ , ದಾಸರು – ದಾಸ ಸಾಹಿತ್ಯ ವಿಮರ್ಶೆ, ಜನಪದ ಕಾವ್ಯ
