ಕರ್ನಾಟಕ ವೈಭವ / Karnataka Vaibhava
Author:Dr Shashidhara
Pages:252
Edition: 2023
Book Size: 1/8th Demmy
Binding: Paper Back
Publisher: Ayodhya Publication
Description
ಕರ್ನಾಟಕ ವೈಭವ / Karnataka Vaibhava -‘ಕರ್ನಾಟಕ ವೈಭವ’ ಕೃತಿಯು ಕನ್ನಡದ ಒಂದು ಮಹತ್ವದ ಕೃತಿಯಾಗಿದ್ದು ಇದರಲ್ಲಿ ಕರ್ನಾಟಕದ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪ, ನೃತ್ಯ, ರಂಗಭೂಮಿ, ಸಿನೆಮಾ – ಹೀಗೆ ಹತ್ತುಹಲವು ಕ್ಷೇತ್ರಗಳ ಬಗ್ಗೆ ಆಯಾ ವಿಷಯತಜ್ಞರೇ ಬರೆದಿರುವ ಮಾಹಿತಿಪೂರ್ಣ ಬರಹಗಳಿವೆ. ಕರ್ನಾಟಕದ ಹೆಸರಿನ ಇತಿಹಾಸ, ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಲಾಂಛನ-ಸಂಕೇತಗಳ ಬಗ್ಗೆ ಮಾಹಿತಿ, ಕರ್ನಾಟಕದಲ್ಲಿ ನಡೆದುಹೋಗಿರುವ ಅತಿಮಹತ್ವದ ಹೋರಾಟಗಳು, ಚಳವಳಿಗಳು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ, ಕನ್ನಡ ನಾಡು-ನುಡಿಯ ಹಿತರಕ್ಷಣೆಗಾಗಿ ನಡೆದಿರುವ ಆಂದೋಲನಗಳು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಗಳು – ಹೀಗೆ ಹಲವು ವಿಚಾರಗಳ ಸಮಗ್ರ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ. ಕರ್ನಾಟಕ ಮತ್ತು ಕನ್ನಡ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುವವರಿಗೆ ಇದು ಅತ್ಯಂತ ಉಪಯುಕ್ತ ಕೃತಿ.
