ನಿಗೂಢ / Nigooda
ನಿಗೂಢ / Nigooda Original price was: ₹200.Current price is: ₹180.
Back to products

ಕುಂತ್ರೆ ನಿಂತ್ರೆ ಬೇಂದ್ರೆ / Kuntre Nintre Bendre

Author:M N Sundararaj

Pages:140

Edition: 2024

Book Size: 1/8th Demmy

Binding: Paper Back

Publisher:Sneha Book House

Original price was: ₹175.Current price is: ₹158.

In stock

Description

ಕುಂತ್ರೆ ನಿಂತ್ರೆ ಬೇಂದ್ರೆ / Kuntre Nintre Bendre – ವರಕವಿ ಬೇಂದ್ರೆ ಅವರ ಕಾವ್ಯದ ಬಗ್ಗೆ ತಿಳಿದು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯತೆ ನನಗಿಲ್ಲದಿದ್ದರೂ ಅವರ ಬಗ್ಗೆ ಹೆಚ್ಚು ತಿಳಿಯಬೇಕೆನ್ನುವ ಹಂಬಲ ನನಗೆ ಮೊದಲಿನಿಂದಲೂ ಇದೆ. ಸಾಹಿತ್ಯ ಪ್ರಕಾರದಲ್ಲಿ ಗದ್ಯ ರೀತಿ ನನಗೆ ಹಿಡಿಸಿದಷ್ಟು ಕಾವ್ಯ ಅಷ್ಟಾಗಿ ಹಿಡಿಸಿಲ್ಲವೆಂದರೇ ಅದಕ್ಕೆ ನನ್ನ ಓದಿನ ಮಿತಿಯಲ್ಲದೆ ಬೆರಿನ್ನೇನಲ್ಲ. ಆದರೂ ಕಾವ್ಯ ಎಂದರೆ ಥಟ್ಟನೆ ನನಗೆ ನೆನಪಾಗೋದು ಬೇಂದ್ರೆ ಒಬ್ಬರೇ. ಇಡೀ ನನ್ನ ಇಷ್ಟು ವರ್ಷದ ಓದಿನಲ್ಲಿ ನಾನು ಓದಬೇಕೆಂದುಕೊಂಡಿದ್ದ ಮತ್ತು ಓದಿದ ಮೊದಲ ಕಾವ್ಯವೆಂದರೇ ಅದು “ನಾಕುತಂತಿ” ಒಂದೇ. ಅದನ್ನು ಓದಿದ ನಂತರ ಎಷ್ಟು ಅರ್ಥವಾಯಿತೋ ಇಲ್ಲವೋ ಕಾಣೆ. ಆದರೆ ಮನಸ್ಸು ನಿರುಮ್ಮಳವಾಯಿತು.

ಮೊನ್ನೆ ನಡೆದ ಬೆಂಗಳೂರು ಪುಸ್ತಕೋತ್ಸವದಲ್ಲಿ ಯಾವುದೋ ಪುಸ್ತಕವನ್ನು ಅರಸುತ್ತಿದ್ದಾಗ ಇದೆಲ್ಲಿ ಕಣ್ಣಿಗೆ ಬಿತ್ತೋ? ಬೇಂದ್ರೆ ಅಜ್ಜನ ಜೀವನದ ಹಲವು ಸ್ವಾರಸ್ಯಗಳು, ಘಟನೆಗಳು, ಕವನ ಸ್ಪುರಿಸಿದ ಘಳಿಗೆ, ಅನೇಕ ಸಂದಂರ್ಭಗಳ ಬಗ್ಗೆ ವಿವರವಾಗಿ ಅಲ್ಲವಾದರೂ ಚುಟುಕಾಗಿ ಬರೆದ ಪುಸ್ತಕವಿದಾದ್ದರಿಂದ ಕೊಂಡು ತಂದೆ. ಒಂದೇ ಸಿಟ್ಟಿಂಗ್ ಸಾಕು ಈ ಪುಟಾಣಿ ಪುಸ್ತಕವನ್ನೋದಲು. ಕೆಲವು ಘಟನೆಗಳು ಮೊದಲೇ ಓದಿ ಗೊತ್ತಿತ್ತು, ಇನ್ನು ಕೆಲವು ಈ ಪುಸ್ತಕ ಮುಖೇನ ತಿಳಿದುಬಂದವು. ಕೆಳಗಿನ ಒಂದೆರೆಡು ಸನ್ನಿವೇಶಗಳು ನಿಮ್ಮ ಆವಗಾಹನೆ/ಕುತೂಹಲಕ್ಕೆ.

ಅನಾರೋಗ್ಯದ ಕಾರಣ ಬೇಂದ್ರೆ ಅವರನ್ನು ಮುಂಬೈನ ಹರಿಕೃಷ್ಣದಾಸ್ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅವರ ಆರೋಗ್ಯ ತೀರ ಹದಗೆಟ್ಟಿರುತ್ತದೆ. ಇನ್ನೇನು ಬದುಕುಳಿಯುವ ಸಾಧ್ಯತೆಗಳೂ ಕಡಿಮೆ ಇರುತ್ತದೆ. ಅಂತಹ ಒಂದು ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಶುಶ್ರೂಷಕಿ ಅದೃಷ್ಟವಶಾತ್ ಆಕೆ ಕನ್ನಡದವಳೇ ಆಗಿರುತ್ತಾಳೆ. ಜ್ಞಾನಪೀಠ ಪಡೆದ ಅವರ ಬಗ್ಗೆ ಆಕೆಗೆ ಅಪಾರ ಅಭಿಮಾನವಿರುತ್ತದೆ. ನಿಸ್ಪೃಹ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಗಮನಿಸಿದ ಬೇಂದ್ರೆಯವರು “ನಿನ್ನ ಹೆಸರೇನವ್ವಾ” ಅಂತ ಕೇಳ್ತಾರೆ. ಆಕೆ ಸಾವಿತ್ರಿ ಎಂದು ಹೇಳುತ್ತಾಳೆ. ಅದಕ್ಕೆ ಬೇಂದ್ರೆ “ಹಂಗಾದ್ರೆ ಆರಾಮಾತು ಬಿಡು, ನೀನಿದ್ರಾ ಇಲ್ಲಿ ಯಮನೂ ಸುಳಿಯಲಾರ” ಎಂದು ನಗೆ ಚಟಾಕಿ ಹಾರಿಸುತ್ತಾರೆ. ಇದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬೇಂದ್ರೆಯವರ ವಿನೋದ ಪ್ರವೃತ್ತಿಯನ್ನು ತೋರಿಸುತ್ತದೆ. ಇದಾಗಿ ಕೆಲವೇ ದಿನಗಳಲ್ಲಿ ಅವರು ಅದೇ ಆಸ್ಪತ್ರೆಯಲ್ಲಿ ದೀಪಾವಳಿ ಹಬ್ಬದ ನರಕ ಚತುರ್ಥಿಯಂದು ಸಾವನ್ನಪ್ಪುತ್ತಾರೆ.