ಕುನನ್ ಪೋಶ್ಪೋರ ನೆನಪು ನಿಮಗಿದೆಯೇ? / Kunan Poshpora Nenapu Nimagideye?
Author:Kiran Manjunath
Pages:300
Edition: 2024
Book Size: 1/8th Demmy
Binding: Paper Back
Publisher: Ruthumana Prakashana
Specification
Description
ಕುನನ್ ಪೋಶ್ಪೋರ ನೆನಪು ನಿಮಗಿದೆಯೇ? / Kunan Poshpora Nenapu Nimagideye? – 1991ರ ಚಳಿ ತುಂಬಿದ ಒಂದು ರಾತ್ರಿ ಭಾರತೀಯ ಸೈನಿಕರು ಮತ್ತು ಅಧಿಕಾರಿಗಳ ಗುಂಪೊಂದು ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಸಂಶಯದ ಮೇಲೆ ಕಾಶ್ಮೀರದ ಎರಡು ಹಳ್ಳಿಗಳಿಗೆ ನುಗ್ಗಿ, ಮನೆಯಲ್ಲಿದ್ದ ಗಂಡಸರನ್ನು ಹೊರಗೆಳೆದು ಚಿತ್ರಹಿಂಸೆ ನೀಡಿದರು. ಗ್ರಾಮಸ್ಥರು ಹೇಳುವ ಪ್ರಕಾರ ಅನೇಕ ಹೆಂಗಸರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಸಂತ್ರಸ್ತರಿಗೆ ಯಾವುದೇ ನ್ಯಾಯ ಸಿಗುವ ಅವಕಾಶಗಳಿಲ್ಲದಂತೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನಗಳಾದವು. ಇದಾದ 21 ವರುಷಗಳ ನಂತರ 2012ರಲ್ಲಿ ದೇಶದಾದ್ಯಂತ ಕೋಲಾಹಲ ಎಬ್ಬಿಸಿದ ನಿರ್ಭಯಾ ಪ್ರಕರಣದಿಂದ ಕುನನ್ ಪೋಶ್ಪೋರ ದುರ್ಘಟನೆಯು ಮತ್ತೆ ಮುನ್ನೆಲೆಗೆ ಬಂತು. ಕಾಶ್ಮೀರದ ಇಪ್ಪತ್ತರ ಹರೆಯದ ಯುವತಿಯರ ತಂಡವೊಂದು ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಪ್ರಕರಣವನ್ನು ಪುನಃ ತೆರೆದರು. ಅಂದು ಬದುಕುಳಿದವರು ಏನಾದರು ಎಂದು ನೋಡುವಂತೆ ನಮ್ಮನ್ನು ಪ್ರೇರೇಪಿಸಿದರು. ಈ ಪುಸ್ತಕವು ನ್ಯಾಯದ ಪ್ರಶ್ನೆ, ಕಳಂಕದ ಪ್ರಶ್ನೆಯ ಜೊತೆಗೆ ಪ್ರಭುತ್ವದ ಜವಾಬ್ದಾರಿ ಮತ್ತು ಆಘಾತದಿಂದ ದೀರ್ಘಾವಧಿಯಲ್ಲಿ ಉಂಟಾಗುವ ಪರಿಣಾಮದಂತಹ ಪ್ರಶ್ನೆಗಳನ್ನು ಪರೀಶೀಲಿಸುತ್ತದೆ.
