ಗಟ್ಟಿಗಿತ್ತಿ / Gattigitti
Author: Vishweshwar Bhat
Pages:172
Edition: 2019
Book Size: 1/8th Demmy
Binding: Paper Back
Publisher: Dhatri Prakashana
Description
ಗಟ್ಟಿಗಿತ್ತಿ / Gattigitti -“ಗಟ್ಟಿಗಿತ್ತಿ” ಭಾರತದ ಪ್ರಥಮ ಮಹಿಳಾ ಬಾಕ್ಸರ್ ಮೇರಿಕೋಮ್ ಳ ಆತ್ಮಕಥೆ ‘ದಿ ಅನ್ ಬೀಟಬಲ್” ನ ಕನ್ನಡ ಅನುವಾದ. ಮೇರಿ ತನ್ನ ಕಥೆಯನ್ನು ತಾನೆ ಹೇಳುತ್ತಿರುವ ಶೈಲಿಯಲ್ಲಿದೆ. ಭಟ್ಟರ ಅನುವಾದ ಎಷ್ಟು ಚೆನ್ನಾಗಿದೆಯೆಂದರೆ ಸ್ವತಃ ಮೇರಿಯೇ ನಮ್ಮ ಮುಂದೆ ಕುಳಿತು ಕಥೆ ಹೇಳುತ್ತಿರುವಂತಿದೆ.ಭಾರತದ ಉತ್ತರ ಪೂರ್ವ ರಾಜ್ಯ ಮಣಿಪುರದ ಒಂದು ಗುಡ್ಡಗಾಡಿನ ಪ್ರದೇಶದಲ್ಲಿ ಹುಟ್ಟಿದ ಮೇರಿ ಮೊದಲು ತನ್ನ ಪೂರ್ವಜರ ಬಗೆಗೆ ಹೇಳುತ್ತಾ ಹೋಗುತ್ತಾಳೆ. ಆ ಹೆಸರುಗಳು ಎಷ್ಟು ವಿಚಿತ್ರವಾಗಿದೆಯೆಂದರೆ ಹೀಗೂ ಹೆಸರುಗಳು ಇರುತ್ತವ ಎಂದು ನಗು ಬರುತ್ತದೆ. ನಂತರ ತನ್ನ ಬಾಲ್ಯ ಹಾಗೂ ತನ್ನ ತಂದೆ ತಾಯಿಯ ಬಗೆಗೆ ಹೇಳುತ್ತಾಳೆ. ಮನೆಗೆ ದೊಡ್ಡ ಮಗಳಾಗಿ ತಾನು ಹೇಗೆ ತಂದೆ ಹಾಗೂ ತಾಯಿಗೆ ಇಬ್ಬರಿಗೂ ಸಹಾಯ ಮಾಡುತ್ತಿದ್ದೆ ಎಂದು ವಿವರಿಸುತ್ತಾ ಹೋಗುತ್ತಾಳೆ. ಕಾಡಿನಲ್ಲಿನ ಅಪ್ಪನಿಗೆ, ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡಿ ನಂತರ ತಮ್ಮ ತಂಗಿಯನ್ನು ಕರೆದುಕೊಂಡು ಶಾಲೆಗೆ ಹೋಗುತ್ತಿದ್ದದ್ದು, ಶಾಲೆಯಲ್ಲಿ ಅವರಿಗೆ ಯಾರಾದರೂ ಕೀಟಲೆ ಮಾಡಿದರೆ ಹಿರಿಯಕ್ಕನಾಗಿ ಅವರನ್ನು ಕಾಪಾಡಲು ಕಾಡಿದ ಹುಡುಗರಿಗೆ ಎರಡು ತದುಕಿ ಬಂದದ್ದನ್ನು ವಿವರಿಸಿದಾಗ ಓದುಗನಿಗೆ ನಗು ಬರದೇ ಹೋಗುವುದಿಲ್ಲ. ಗೋಲಿಯಾಟದಲ್ಲಿ ಊರಿಗೇ ಫೇಮಸ್ ಆಗಿದ್ದ ಮೇರಿ ವಾರಿಗೆಯವರ ಗೋಲಿಗಳನ್ನೆಲ್ಲ ಗೆದ್ದು ಮತ್ತೆ ಅದನ್ನು ಅವರಿಗೇ ಮಾರುತ್ತಿದ್ದೆ ಎಂದಾಗ ನಮಗೆ ನಮ್ಮ ಬಾಲ್ಯ ನೆನಪಾಗದೇ ಇರುವುದಿಲ್ಲ. ಬರೀ ಗೋಲಿಯೊಂದೇ ಅಲ್ಲದೇ ಶಾಲೆಯಲ್ಲಿ ಎಲ್ಲ ಆಟಗಳಲ್ಲೂ ಮೇರಿಯೇ ಮೊದಲು. ಅವಳಿಗಿರುವ ಕ್ರೀಡಾಸಕ್ತಿಯನ್ನು ಗಮನಿಸಿ ಶಾಲೆಯ ಪ್ರಾಚಾರ್ಯರು ಅವಳ ತಂದೆಯನ್ನು ಕರೆಸಿ ಇಂಫಾಲದ ಸ್ಪೋರ್ಟ್ಸ್ ಅಕಾಡೆಮಿಗೆ ಸೇರಿಸಲು ಸಲಹೆ ನೀಡಿದಲ್ಲಿಂದ ಅವಳ ಜೀವನದ ಗುರಿ ಬದಲಾಗುತ್ತದೆ. ಏನಾದರು ಮಾಡಿ ಅಕಾಡೆಮಿಗೆ ಸೇರಬೇಕು ಆದರೆ ಹಣವಿಲ್ಲ,
