ಗಿರಿಧರ / Giridhara
Author: Saisuthe
Pages:252
Edition: 2017
Book Size: 1/8th Demmy
Binding: Paper Back
Publisher: Sudha Enterprises
Specification
Description
ಗಿರಿಧರ / Giridhara – ಈ ಕಾದಂಬರಿಯ ಮುಖ್ಯವಿಷಯ ಪ್ರೇಮ,ಆ ಹುಡುಗನನ್ನು ಮಾತನಾಡಿಸಬೇಕೆಂದು ಅವಳ ಹೃದಯ ಹಾತೊರೆಯಿತು. ಅವನನ್ನು ಅಪ್ಪಿಕೊಳ್ಳಬೇಕೆಂಬ ಬಯಕೆ. ಅದನ್ನೇ ಕಾರ್ಯರೂಪಕ್ಕೆ ತರುವ ಶಕ್ತಿ ಅವಳಿಗಿರಲಿಲ್ಲ. “ಇಲ್ಲಿ ಬಾ” ಎಮ್ದು ಸನ್ನೆ ಮಾಡಿದಳು. ಅಳುಕಿಕೊಂಡು ಹೆಜ್ಜೆ ಇಟ್ಟರು ಅದರಲ್ಲಿ ದೃಢತೆ ಇತ್ತು. ಅದು ಅಪರಿಚಿತವಲ್ಲ. ಕ್ರಾಪಿನಲ್ಲಿ ಕೈಯಾಡಿಸಿದಳು. ಅರ್ಥವಾಗದ ಅಲೌಕಿಕ ಸಂತಸ. “What is your name?” ಮೃದುವಾದ ಪ್ರಶ್ನೆ. “My name is Rajesh. Master Giridhar” ಎಂದು ಹೇಳೀ ಓಡಿಬಿಟ್ಟ. ಹತ್ತಿರಕ್ಕೆ ಬಂದ ತಂದೆಯ ಕೈ ಹಿಡಿದು ನಿಧಾನವಾಗಿ ಸಾಗಿಹೋದ. ಕಾರಿನ ಬಾನೆಟ್ ಎತ್ತಿ ರಿಪೇರಿಯಲ್ಲಿ ತೊಡಗಿದ್ದ ರಾಜು ಹತ್ತಿ ಕೂತು ಸ್ಟಾರ್ಟ್ ಮಾಡಿದ. ಸುಮನ್ ಯಾಂತ್ರಿಕವಾಗಿ ಹತ್ತಿ ಕೂತಳು. ಅವಳ ಹೃದಯ “ಗಿರಿಧರ್…ಗಿರಿಧರ್” ಎಂದು ಜಪಿಸುತ್ತಿತ್ತು.ಇಂತಹ ಹಲವು ಕ್ಷಣಗಳು ಓದುಗರನ್ನ ಈ ಕಾದಂಬರಿಯು ಎದುರುಗೊಳ್ಳುತ್ತದೆ.
