ಚಂಪಾ ಸಾಹಿತ್ಯ ಸಂಪುಟ-1 ಚಂಪಾ ನಾಟಕಗಳು / Champa Sahithya Samputa-1 Champa Natakagalu
Author: Chandrasekhara Patil
Pages: 288
Edition: 2017
Book Size: 1/8th Demmy
Binding: Paper Back
Publisher: Sapna Book House
Description
ಚಂಪಾ ಸಾಹಿತ್ಯ ಸಂಪುಟ-1 ಚಂಪಾ ನಾಟಕಗಳು / Champa Sahithya Samputa-1 Champa Natakagalu – ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ನಾಟಕಗಳ ಸಮಗ್ರ ಸಂಕಲನ ‘ಚಂಪಾ ನಾಟಕಗಳು’. 2006ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ, 2012ರಲ್ಲಿ ಮರುಮುದ್ರಣ ಕಂಡಿದೆ. 2017ರಲ್ಲಿ ಮೂರನೇ ಮುದ್ರಣ ಕಂಡಿದೆ. ಲೇಖಕರೇ ಹೇಳುವಂತೆ,’ ಈ ಸಂಪುಟದಲ್ಲಿ ಅಡಕವಾದ ಹನ್ನೊಂದು ನಾಟಕಗಳು ರಚಿತವಾದ ಅವಧಿ: 1968ರಿಂದ 1980. ಅನಂತರ ನಾನು ನಾಟಕ ಬರೆದಿಲ್ಲ. ಅಂತರಂಗದ ರಂಗದ ಮೇಲೆ ಕುಣಿಯುತ್ತಿರುವ ಅನೇಕ ನಾಟಕಗಳು ಥಕ ಥೈ ಎಂದು ಹೊರಗೆ ಧುಮುಕುವುದನ್ನು ನಾನೂ ಕಾಯುತ್ತಿರುವೆ. ನನ್ನ ನಾಟಕಗಳೆಲ್ಲ ನನ್ನನ್ನು ಕಾಡುವ, ಕಾಡುತ್ತಿರುವ ಅನೇಕ ಸಮಸ್‌ಎಗಳಿಗೆ -(ಪರಿಹಾರವನ್ನಲ್ಲ)-ಒಂದು ರೂಪು ಕೊಡಲು ಮಾಡಿದ ಪ್ರಯತ್ನಗಳೇ’ ಎಂದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಕೊಡೆಗಳು, ಅಪ್ಪ, ಕುಂಟಾ ಕುಂಟಾ ಕುರವತ್ತಿ, ಗುರ್‍ತಿನವರು, ಟಿಮಗರ ಬುಡ್ಡಣ್ಣ, ಕತ್ತಲ ರಾತ್ರಿ, ಗೋಕರ್ಣದ ಗೌಡಶಾನಿ, ಜಗದಂಬೆಯ ಬೀದಿ ನಾಟಕ, ಬುರಡಿ ಬಾಬಾನ ಲಕ್ಷಾಪಹರಣ ಪವಾಡ, ನಳಕವಿಯ ಮಸ್ತಕಾಭಿಷೇಕ, ವಂದಿ ಮಾಗಧ ಎಂಬ 11 ನಾಟಕಗಳು ಈ ಕೃತಿಯಲ್ಲಿವೆ.
