ಚಲಂ / Chalam

Author: Ravi Belagere

Pages:192

Edition: 2021

Book Size: 1/8th Demmy

Binding: Paper Back

Publisher: Bhavana Prakashana

Specification

Original price was: ₹180.Current price is: ₹162.

In stock

Description

ಚಲಂ / Chalam – ಸುಮಾರು ಮೂವತ್ತು ವರ್ಷಗಳಿಂದ ಒಂದು ತೆಲುಗು ಪುಸ್ತಕ ನನ್ನೊಂದಿಗಿದೆ. ನಾನು ಹೋದಲ್ಲಿಗೆಲ್ಲ ಲಗೇಜಿನೊಂದಿಗೆ ಬಂದಿದೆ. ಕಪಾಟಿನಲ್ಲಿ ಕುಳಿತಿದೆ. ದಿಂಬಿನಡಿ ನಲುಗಿದೆ. ಬೇಸರವಾದಾಗ ಸಮಾಧಾನ ಹೇಳಿದೆ, ಅದರ ರಟ್ಟು ಹರಿದಿದೆ. ಪುಟಗಳು ಜೀರ್ಣ ಜೀರ್ಣ, ಆದರೂ ಜೊತೆಯಲ್ಲಿಟ್ಟುಕೊಂಡೇ ಇದ್ದೆ. ಅದು ತೆಲುಗಿನ ‘ಚಲಂ’ನ ಆತ್ಮಚರಿತ್ರೆ. ನಾನು ಆತನಂತೆ ಬರೆಯಲು ಪ್ರಯತ್ನಿಸಿದೆ. ಆಗಲಿಲ್ಲ. ಆತನಂತೆ ಬದುಕಲು ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ. ಆತನನ್ನು ಕಡೆಗೆ ಧಿಕ್ಕರಿಸಲು ನೋಡಿದೆ. ಅದೂ ಸಾಧ್ಯವಾಗಲಿಲ್ಲ. ಹೀಗಾಗಿ, ಆತನನ್ನು ನೀಗಿಕೊಳ್ಳುವ ಕೊನೆಯ ಪ್ರಯತ್ನವಾಗಿ ಈ ಕೆಲಸ ಮಾಡುತ್ತಿದ್ದೇನೆ, ಆತನ ಪುಸ್ತಕ ‘ಆತ್ಮಕಥ’ ಅನುವಾದಿಸುತ್ತಿದ್ದೇನೆ. ಚಲಂನ ಬದುಕಿನ ಕಥೆ ಓದಲು ಚಂದವೇ ಹೊರತು ಆತ ಅನುಕರಣೀಯನಲ್ಲ ಆತನಂತೆ ಬದುಕಲು ಯತ್ನಿಸಬೇಡಿ, ಹಾಗಂತ ಹೇಳಿಯೇ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದನೆ. ಓದುವ ಸಂಕಟ ನಿಮ್ಮದಾಗಲಿ.