ಜಾರುವ ದಾರಿಯಲ್ಲಿ / Jaruva Dariyalli
Author: Dr.K. Shivarama Karantha
Pages: 392
Edition: 2021
Book Size: 1/8th Demmy
Binding: Paper Back
Publisher: Sapna Book House
Specification
Description
ಜಾರುವ ದಾರಿಯಲ್ಲಿ / Jaaruva Daariyalli – ‘ಜಾರುವ ದಾರಿಯಲ್ಲಿ’ ಶಿವರಾಮ ಕಾರಂತರ ಕಾದಂಬರಿ. ಬದುಕಿನ ಪಯಣ ಸಾಗುತ್ತಿದ್ದಾಗಲೂ, ತನ್ನ ಆದರ್ಶಗಳನ್ನು ಬಲಿಕೊಡದ ನಾಯಕನ ಕತೆ ಇದು. ನಾಯಕ ಕಿಟ್ಟಪ್ಪ ಆದರ್ಶವನ್ನು ತನ್ನ ನಡತೆಯಲ್ಲಿ ರೂಢಿಸಿಕೊಂಡಾತ. ಕೊನೆಯ ತನಕ ಆದರ್ಶಮಯವಾದ ಬದುಕನ್ನು ಬಾಳಿದ್ದ ಕಥಾನಾಯಕನ ಸುತ್ತ ಈ ಕತೆ ಹೆಣೆಯಲಾಗಿದೆ. ಕಾಳೂರಿನ ಉಪಾಧ್ಯಾಯ- ಶಿವಪ್ಪ, ಈತನ ಮಗ ಕಿಟ್ಟಪ್ಪ. ಐದಾರು ಜನ ಹೆಣ್ಣುಮಕ್ಕಳು. ಬಡತನ ಬೇರೆ. ತಮ್ಮ ಬಿಡುವಿನಲ್ಲಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಲೆಕ್ಕಪತ್ರ ಬರೆಯುತ್ತಿದ್ದ. ಗೆಳೆಯರಿಂದ ಬಂದ ಹಣದ ನೆರವಿನಿಂದಾಗಿ ಕಿಟ್ಟಪ್ಪನಿಗೆ ವೈದ್ಯಕೀಯ ಶಿಕ್ಷಣ ಕೊಡಿಸುತ್ತಾನೆ. ಶಿಕ್ಷಣಕ್ಕೆ ವಿಶೇಷ ನೆರವು ನೀಡಿದ್ದ ಸಣ್ಣಕಲ್ಲು ರಂಗರಾಯರ ಮಗಳು ಇಂದುಮತಿಯನ್ನು ಕಿಟ್ಟಪ್ಪ ಮದುವೆಯಾಗುತ್ತಾನೆ. ಇದರಿಂದ, ತಂದೆ ಶಿವಪ್ಪ ಸಿಟ್ಟಾಗುತ್ತಾನೆ. ಮದುವೆಗೂ ಹೋಗುವುದಿಲ್ಲ. ರಂಗರಾಯರಿಂದ ಹಣ ಪಡೆದಿದ್ದು ಸಾಲವಾಗಿ, ಎಂದಾದರೂ ಒಂದು ದಿನ ತೀರಿಸಲೇ ಬೇಕು ಎಂಬುದು ಶಿವಪ್ಪನ ಈ ನಡೆಗೆ ಕಾರಣವಾಗಿತ್ತು. ಧಾರವಾಡದಲ್ಲೇ ಪ್ರಾಕ್ಟೀಸ್ ಮಾಡುವಂತೆ ಮಾವ ರಂಗರಾಯರಿಂದ ಒತ್ತಾಯವಿದ್ದರೂ ಕಿಟ್ಟಪ್ಪ ತಮ್ಮೂರಲ್ಲೇ ಪ್ರಾಕ್ಟೀಸ್ ಮಾಡುವುದಾಗಿ ಹೇಳುತ್ತಾನೆ. ಬಡಬಗ್ಗರಿಗೆ ಉಚಿತ ಸೇವೆ ನೀಡುತ್ತಾನೆ. ಪತ್ನಿ ಇಂದುಮತಿಗೆ ಹಳ್ಳಿಯಲ್ಲಿರಲು ಇಷ್ಟವಾಗುವುದಿಲ್ಲ. ಜೊತೆಗೆ ಹಣ ಗಳಿಕೆಯ ಆಸೆ ಕಿಟ್ಟಪ್ಪನಿಗೆ ಇಲ್ಲದ್ದರಿಂದ ಇಂದುಮತಿಯ ಕನಸುಗಳು ಬೇಗ ಕಮರಿ ಹೋಗುತ್ತವೆ. ಈ ಮಧ್ಯೆ, ಶಿಕ್ಷಣಕ್ಕಾಗಿ ಪಡೆದಿದ್ದ ಸಾಲದ ಹಣವನ್ನು ಮಾವನಿಗೆ ಹಿಂತಿರುಗಿಸುತ್ತಾನೆ. ಕಿಟ್ಟಪ್ಪನ ತಾಯಿ ಸಾಯುತ್ತಾಳೆ.
