ಜುಗಲಬಂದಿ ಚಿಂತಕ ಡಾ ಯು ಆರ್ ಅನಂತಮೂರ್ತಿ / Jugalabandi Chinthaka U R Ananthamurthy
Author: G K Ravindrakumar
Pages:128
Edition: 2019
Book Size: 1/8th Demmy
Binding: Paper Back
Publisher: Chethana Book House
Description
ಜುಗಲಬಂದಿ ಚಿಂತಕ ಡಾ ಯು ಆರ್ ಅನಂತಮೂರ್ತಿ / Jugalabandi Chintaka U R Ananthamurthy -‘ಯು.ಆರ್. ಅನಂತಮೂರ್ತಿ’ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜ್ಞಾನಪೀಠ ಪ್ರಶಸ್ತಿ ವಿಜೇತರು ಸರಣಿಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಲೇಖಕ ಬಸವರಾಜ ಸಬರದ ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 1955ರಿಂದ 1995 ರವರೆಗೆ ನಲವತ್ತು ವರ್ಷಗಳ ಅವಧಿಯಲ್ಲಿ ಡಾ.ಯು. ಆರ್. ಅನಂತಮೂರ್ತಿಯವರು ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಈ ಚಿಕ್ಕ ಪುಸ್ತಿಕೆಯಲ್ಲಿ ಅವರ ಕಾದಂಬರಿಗಳನ್ನು ತೌಲನಿಕ ವಿವೇಚನೆಗೊಳಪಡಿಸಿ ವಿಮರ್ಶಿಸಲಾಗಿದೆ. ಅವರ ಉಳಿದ ಕೃತಿಗಳ ಪರಿಚಯ ಸಮೀಕ್ಷೆ ಮಾತ್ರ ಇಲ್ಲಿ ಸಾಧ್ಯವಾಗಿದೆ ಎಂದಿದ್ದಾರೆ ಬಸವರಾಜ ಸಬರದ. ಈ ಕೃತಿಯಲ್ಲಿ ಮೊದಲಿಗೆ ವ್ಯಕ್ತಿ-ಜಿವನ ಮಾಹಿತಿ ಇದ್ದರೆ ಆನಂತರದಲ್ಲಿ ಕೃತಿಗಳ ಕುರಿತ ಮಾಹಿತಿಗಳಿವೆ. ಕಾದಂಬರಿಗಳ ತೌಲನಿಕ ವಿವೇಚನೆ, ಸಣ್ಣ ಕಥೆಗಳು, ಕಾವ್ಯ, ನಾಟಕ, ವಿಮರ್ಶೆ ಕುರಿತ ವಿಶ್ಲೇಷಣೆಗಳೊಂದಿಗೆ ಸಮಾರೋಪ, ಹಾಗೂ ಅನುಬಂಧ ಸಂಕಲನಗೊಂಡಿವೆ.
