ಜೈಲು ಕತೆಗಳು / Jailu Kategalu
Author: K. Satyanarayana
Pages: 136
Edition: 2023
Book Size: 1/8th Demmy
Binding: Paper Back
Publisher: Amulya Pustaka
Description
ಜೈಲು ಕತೆಗಳು / Jailu Kathegalu – ಕೆ. ಸತ್ಯನಾರಾಯಣ ಅವರ ಕೃತಿ. ಕೃತಿಯ ಕುರಿತು ಬರೆದಿರುವ ನರೇಂದ್ರ ಪೈ ಅವರು ‘ಓದಿದ ನಂತರವೂ ಸಂವೇದನೆಯ ನೆಲೆಯಲ್ಲಿ ಬಹುಕಾಲ ನಮ್ಮನ್ನು ಕಾಡುತ್ತಲೇ, ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿಯುವ ಕಥನಗಳು; ಯಾವುದೋ ಒಂದು ಅವ್ಯಕ್ತ ಬಗೆಯಲ್ಲಿ ನಮ್ಮ ಅಂತಃಸ್ಸಾಕ್ಷಿಯನ್ನು ಚುಚ್ಚುವ ಮತ್ತು ಆ ಕಾರಣಕ್ಕೆ ಬದುಕಿನ ಕುರಿತೇ ಜಿಜ್ಞಾಸೆ ಹುಟ್ಟಿಸುವಂಥ ಕಥನಗಳು; ತಮ್ಮ ಅಪರಾಧದ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು, ಸಮರ್ಥನೆಯುಳ್ಳ, ಒಂದಿಷ್ಟೂ ಗೊಂದಲವಾಗಲಿ ಅಪರಾಧಿ ಪ್ರಜ್ಞೆಯಾಗಲಿ ಇಲ್ಲದ, ಕೆಲವೊಮ್ಮೆ ನಾವು ಒಪ್ಪಬಹುದಾದ ಮತ್ತು ಕೆಲವೊಮ್ಮೆ ಒಪ್ಪಲಾಗದ ಮಂದಿಯ ಕಥನಗಳು; ಜೈಲಿನ ಒಳಗೇ ಸಕಲ ಸುಖ ಸೌಭಾಗ್ಯ ದಕ್ಕಿಸಿಕೊಂಡವರೂ, ಮಳೆಗೆ ಕೂಡ ನೆರಳಿನಾಶ್ರಯವಿಲ್ಲದವರೂ ಒಟ್ಟೊಟ್ಟಿಗೇ ಇರುವ ವಿಪರ್ಯಾಸಕರ ಸಂಗತಿಯ ಕುರಿತು ತಣ್ಣಗಿನ ದನಿಯಲ್ಲಿ ಹೇಳುವ ಕಥನಗಳು; ರಂಗಾಯಣ, ಜೈಲು ಕೇರಿ, ತನಿಖೆ-ಶಿಕ್ಷೆ ಕುರಿತ, ನಾವು ಬದುಕುತಿರುವ ವ್ಯವಸ್ಥೆಯ ಕುರಿತೇ ಕೆಲವೊಂದು ಜಿಜ್ಞಾಸೆಗಳಿಗೆ ಎಡೆ ಮಾಡಿಕೊಡುವ ವಿಶಿಷ್ಟ ಕಥನಗಳು; ಖ್ಯಾತನಾಮರ ಪ್ರಕರಣಗಳು, ವಿಚಿತ್ರ ತಿರುವುಗಳ ಪ್ರಕರಣಗಳು ಇಲ್ಲಿವೆ ಎಂದಿದ್ದಾರೆ.
