ಝೀರೋ ಮತ್ತು ಒಂದು / Zeero Mattu Ondu
Author: Vikram Hatwar
Pages: 192
Edition: 2017
Book Size: 1/8th Demmy
Binding: Paper Back
Publisher: Abhinava
Description
ಝೀರೋ ಮತ್ತು ಒಂದು / Zero Mattu Ondu – ಸಾಫ್ಪ್ ವೇರ್ ಜಗತ್ತಿನಿಂದ ಬಂದ ಕತೆಗಾರರ ಕತೆಗಳು ಕುತೂಹಲದ ಬುತ್ತಿಗಳು. ಅಂತಹ ಹೊಸ ತಲೆಮಾರಿನ ಕತೆಗಾರರಲ್ಲಿ ವಿಕ್ರಂ ಹತ್ವಾರ್ ಕೂಡ ಒಬ್ಬರು. ಶೀರ್ಷಿಕೆಯೇ ಹೇಳುವಂತೆ ಅವರ ’ಝೀರೊ ಮತ್ತು ಒಂದು’ ಸಾಫ್ಟ್ವೇರ್ ಪ್ರಪಂಚವನ್ನು ಧ್ಯಾನಿಸುತ್ತದೆ. ಶೀರ್ಷಿಕೆ ಕತೆಯನ್ನೇ ಗಮನಿಸಿ: ‘ಒಂದು ಕವಿತೆಯನ್ನು ಆಸ್ವಾದಿಸುವ ಹಿತದಲ್ಲೇ ಆ ಪ್ರೊಸೆಸ್ಸಿನ ಆಂತರ್ಯವನ್ನು ಆಸ್ವಾದಿಸತೊಡಗಿದ. ಕಣ್ಣಿಗೆ ಕಾಣುವ ಕೋಡಿಂಗ್ ಭಾಷೆಯ ಹಿಂದೆ ಬಾಬ್ ಕಿತ್ಸೆಯ ಆಲೋಚನಾ ಕ್ರಮ, ತಂತ್ರ, ಹಾದಿ, ಉದ್ದೇಶ, ಎಲ್ಲವೂ ನಿಚ್ಚಳವಾಗುತ್ತ ಹೋಯಿತು. ಭಗವಾನ್ ನೋಡಿಯೇ ಇರದ ಮನುಷ್ಯನೊಬ್ಬ ಅವನ ಮುಂದೆ ಝೀರೋ ಮತ್ತು ಒಂದರ ಸರಣಿಯಲ್ಲಿ ಬೆತ್ತಲಾಗುತ್ತ ಹೋದ…’ಇಂತಹ ಮತ್ತಷ್ಟು ಶಕ್ತಿಶಾಲಿ ಕತೆಗಳನ್ನು ಆಸ್ವಾದಿಸಬೇಕಾದರೆ ವಿಕ್ರಂ ರೀತಿಯ ಹೊಸ ತಲೆಮಾರಿನ ಕತೆಗಾರರನ್ನು ಗಾಢವಾಗಿ ಓದಿಕೊಳ್ಳಲೇಬೇಕು.
