ಡಾ.ಬಿ.ಆರ್. ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ / Dr.B.R. Ambedkar Varthamaanadondige Mukhamukhi

Author: B.U. Suma

Pages: 192

Edition: 2022

Book Size: 1/8th Demmy

Binding: Paper Back

Publisher: Ladayi Prakashana

Original price was: ₹200.Current price is: ₹180.

In stock

Description

ಡಾ.ಬಿ.ಆರ್. ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ / Dr.B.R. Ambedkar Varthamaanadondige Mukhamukhi – ಅಂಬೇಡ್ಕರ್‌ ವಿಚಾರಧಾರೆಗಳ ಮೂಸೆಯಲ್ಲಿ ಪ್ರಸ್ತುತ ಸಮಾಜ ಹೇಗಿದೆ ಎಂಬುದನ್ನು ಅರಿಯುವ ಯತ್ನ ಡಾ.ಬಿ.ಯು. ಸುಮಾ ಅವರು ಬರೆದಿರುವ ’ಡಾ. ಬಿ. ಆರ್. ಅಂಬೇಡ್ಕರ್‌-ವರ್ತಮಾನದೊಂದಿಗೆ ಮುಖಾಮುಖಿ’. ಕೃತಿಯ ಮೊದಲ ಅಧ್ಯಾಯದಲ್ಲಿ ಅಂಬೇಡ್ಕರ್‌ ಅವರ ಬದುಕು ಬರಹಗಳನ್ನು ಪ್ರಸ್ತಾಪಿಸಲಾಗಿದೆ. ಎರಡನೇ ಅಧ್ಯಾಯ ಅಂಬೇಡ್ಕರ್‌ ಅಸ್ಪೃಶ್ಯತೆಯನ್ನು ಅನುಭವಿಸಿದುದರ ಕುರಿತಾದದ್ದು. ಧರ್ಮ, ರಾಷ್ಟ್ರೀಯತೆ, ಜಾತಿ ಇತ್ಯಾದಿ ಸಂಗತಿಗಳಿಗೆ ಅವರ ಸ್ಪಂದನೆ ಹೇಗಿತ್ತು ಎಂಬುದನ್ನು ಮೂರನೇ ಅಧ್ಯಾಯ ಸೂಚಿಸುತ್ತದೆ. ಅವರ ಲೇಖನ- ಭಾಷಣಗಳ ಸಾರವೂ ಕೃತಿಯಲ್ಲಿದೆ. ಕಟ್ಟಕಡೆಗೆ ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಮುಖಾಮುಖಿಯಾಗಿ ನಿಲ್ಲಿಸಿ ವಿಶ್ಲೇಷಣೆ ನಡೆಸಲಾಗಿದೆ. ’ಭಾರತೀಯ ಸಮಾಜ ಸವಾಲುಗಳು ಇನ್ನೂ ಜಾತಿಯ ತಳಹದಿಯ ಮೇಲೆಯೇ ನಿಂತಿದೆ. ಆಧುನಿಕತೆ, ಈ ಭಾರತದ ಜಾತೀಯತೆಯನ್ನು ಒರೆಸಿಹಾಕುವುದರಲ್ಲಿ ಯಶಸ್ವಿಯಾಗಿಲ್ಲ. ಬದಲಿಗೆ ಜಾತಿ ಬೇರೆ ಬೇರೆ ವೇಷಗಳಲ್ಲಿ ಮತ್ತೆ ನಮ್ಮ ಮನೆಯಂಗಳದಲ್ಲಿ ವಕ್ಕರಿಸಿಕೊಂಡಿದೆ. ಈ ಸವಾಲನ್ನು ಮತ್ತೆ ಅಂಬೇಡ್ಕರ್‌ ಅವರ ವಿಚಾರಗಳ ಮೂಲಕವೇ ಎದುರಿಸಬೇಕಾದ ಅನಿವಾರ್ಯತೆಯಲ್ಲಿ ಭಾರತ ನಿಂತಿದೆ’ ಎಂಬುದನ್ನು ಕೃತಿ ಸಾರಿ ಹೇಳುತ್ತದೆ.