ತಿರುವುಗಳು / Tiruvugalu
Author:Dr Premalatha B
Pages:168
Edition: 2022
Book Size: 1/8th Demmy
Binding: Paper Back
Publisher: Seema Publication
Description
ತಿರುವುಗಳು / Tiruvugalu – ಏಕಾಂತಿಯ ನೋಟ ಅವನ ಹೊಕ್ಕಳಿನಲ್ಲಿ ಸತ್ತಂತೆ ಮಲಗಿದ್ದ ಹಾವನ್ನು ಭುಸುಗುಡುವಂತೆ ಮಾಡಿತ್ತು. ಆಗೀಗ ಅಂಗಡಿಗೆ ಬಂದವಳ ಕೈ ತಾಗಿದರೆ, ಅವಳ ಮೈಯ ವಾಸನೆ ಬಂದರೆ ಅವನ ಕಾಲುಗಳು ನಡುಗಿದ್ದವು. ಅವಳು ರಾತ್ರಿ ತರಕಾರಿಯ ಬುಟ್ಟಿ ಇಟ್ಟು ಹೋದರೆ ನೆಮ್ಮದಿಯೆನಿಸುತ್ತಿತ್ತು. ಎಲ್ಲ ಜಾಡಿಸಿ ಮಂಕರಿಗಳನ್ನು ಹೊತ್ತು ಹೋದಳೆಂದರೆ ತನ್ನ ಜೊತೆ ಅವನ ಸುತ್ತಲ ಇಹವನ್ನೆಲ್ಲ ಚೀಲ ಮಾಡಿ ಹೊತ್ತೊಯ್ದಳೇನೋ ಎನ್ನುವಂತೆ ಅವನ ಒಂಟಿತನದಲ್ಲೂ ಏಕಾಂತ ಸೃಷ್ಟಿಯಾಗಿಬಿಡುತ್ತಿತ್ತು. ಕೆಂಚಣ್ಣನಿಗೆ ಭಯವಾಗತೊಡಗಿತು.
ಅವರ ಕನಸುಗಳು ಗೋಡೆಗೆ ಗೋಡೆ ತಾಗಿದಂತಿದ್ದ ಆ ಗಡಿರೇಖೆಯ ನಾಡಿನ ಒಳಕ್ಕೂ ಹೊರಕ್ಕೂ ಹಾರಲಾಗದೆ ಬಂಧಿತವಾಗಿದ್ದವು. ಪಂಜರದಲ್ಲಿದ್ದ ಪಾರಿವಾಳದಂತೆಯೇ ಬಾಯ್ಮುಚ್ಚಿ ಗುಕ್ಕಿಡುತಿದ್ದ ಅವರ ಬದುಕು ಸದಾ ಬೆದರಿದಂತಹ ಸ್ಥಿತಿಯಲ್ಲೇ ಇರುತ್ತಿತ್ತು. ಯಾವಾಗ ಬೇಕಾದರೂ ಪರಿಸ್ಥಿತಿ ಬಿಗಡಾಯಿಸಿ ಗುಂಡಿನ ಚಕಮಕಿಯಾಗಬಹುದಿತ್ತು. ಮೂರು ಕಾಳಿಗಾಗಿ ಮತ್ತೊಂದು ಬೆಳಗನ್ನು ಎದುರು ನೋಡುತ್ತ ಏಳುತ್ತಿದ್ದವರ ಜೀವ ಅವರ ಕುತ್ತಿಗೆಯಲ್ಲೇ ಇರುತ್ತಿತ್ತು. ನಿನ್ನೆ ಹುಟ್ಟಿದ ಮಕ್ಕಳು ನಾಳೆ ಬೆಳಿಗ್ಗೆ ಫಕ್ಕನೆ ದೊಡ್ಡವರಾಗಿಬಿಡಬೇಕಿತ್ತು.
