ದಂತದ ಗೊಂಬೆ / Dantada Gombe
Author: Smt. Saisuthe
Pages: 128
Edition: 2021
Book Size: 1/8th Demmy
Binding: Paper Back
Publisher: Sudha Enterprises
Description
ದಂತದ ಗೊಂಬೆ / Dantada Gombe – ‘ಪರಿಶ್ರಮ ಮೆಟ್ಟಲಿನಂತೆ.ಅದ್ರಷ್ಟ ಲಿಫ್ಟ್ ನಂತೆ. ಅದ್ರಷ್ಟ ಕೈ ಕೊಡಬಹುದು. ಆದರೆ ಪರಿಶ್ರಮ ( ಮೆಟ್ಟಲು) ನಿಮ್ಮನ್ನ ಶಿಖರಕ್ಕೆ ಕೊಂಡೊಯ್ಯಬಲ್ಲದು” ಎಂಬ ರಾಷ್ಟ್ರಪತಿ ಅಬ್ದುಲ್ ಕಲಾಂರ ಮಾತುಗಳನ್ನು ಹಿನ್ನುಡಿಯಲ್ಲಿ ಹೊತ್ತ ಈ ದಂತದ ಗೊಂಬೆ ಜೀವನದ ಕೆಲವು ಕಟು ಸತ್ಯವನ್ನು ಈ ಕಾದಂಬರಿಯೂ ನಮ್ಮೆದುರು ತೆರೆದಿಡುತ್ತದೆ.ಹಾತೊರೆಯುವ ಮಗುವಿಗೆ ಮೂಲಭೂತ ಹಕ್ಕಾದ ಶಿಕ್ಷಣವೇ ದೊರೆಯದಿದ್ದರೆ ಆ ಮಗುವಿನ ಪರಿಸ್ಥಿತಿ ಹೇಗಾದೀತು.ಇಂತಹ ಮನಸ್ಥಿತಿಯ ಮಗು ಚಾಮಿ ಯಾನೆ ಶಮಂತ್ ನ ಜೀವನ ಕಥೆಯೇ ದಂತದ ಗೊಂಬೆ.ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದ ಮಗು ಈ ಚಾಮಿ.ಬೇಜವಾಬ್ದಾರಿಯ ಭಾವ ನಾಗರಾಜ,ಸ್ವಂತಿಕೆಯನ್ನು ಕಳಕೊಂಡು ಮೂಕೆತ್ತಿನಂತಾದ ಅಕ್ಕ ಪಂಚಮಿ,ಹಸಿವೆಯಿಂದ ಕಂಗೆಟ್ಟ ಅಷ್ಟಾವಕ್ರ,ಅನಿಷ್ಟ ರೆಂಬ ಮಕ್ಕಳು.ಇವರ ನಡುವೆ ಒಲ್ಲದ ಚಾಮಿ ಅತಿಥಿ ಯಾದ ಬಗೆ ಈ ಕಾದಂಬರಿಯಲ್ಲಿ ಮೂಡಿಬಂದಿವೆ.ಸಿಂಧುಳ ತರಹ ತಾನೂ ಕಾರಲ್ಲಿ ಸುತ್ತುವ ಕನಸು ಚಾಮಿದ್ದು.ತಂಗಿ ತುಳಸಿಯ ಕನವರಿಕೆ,ಓದಿನ ಹಂಬಲ ದೊಡ್ಡ ಮನುಷ್ಯನಾಗುವ ಉನ್ನತ ಗುರಿ ಹೊತ್ತ ಶಮಂತನ ಜೀವನದಲ್ಲಿ ಕಾಳ,ಗುಪ್ತಾಜಿಯವರ ಪಾತ್ರವೇನು?ಚಾಮಿ ತನ್ನ ಗುರಿ ತಲುಪಿದನಾ?ದಂತದ ಗೊಂಬೆಯ ಜೊತೆ ಕಾರಲ್ಲಿ ಸುತ್ತುವ ಕನಸೇನಾಯಿತು? ಚಾಮಿಯ ಬದುಕೇನಾಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಈ ಕಾದಂಬರಿಯಲ್ಲಿ ಅಡಕವಾಗಿದೆ.
