ದಾರಾ ಶುಕೋಹ್ ನ ಕನಸುಗಳು / Dara Shukhohna Kanasugalu
Author:Udayakumara Habbu
Pages:246
Edition: 2021
Book Size: 1/8th Demmy
Binding: Paper Back
Publisher: IBH Publication
Description
ದಾರಾ ಶುಕೋಹ್ ನ ಕನಸುಗಳು / Dara Shukhohna Kanasugaluಕೆಲವು ವರ್ಷಗಳ ಹಿಂದೆ ಪ್ರದರ್ಶಿತವಾಗಿದ್ದ ’ದಾರಾಶಿಕೋವನ ಕನಸುಗಳು’ ಎಂಬೊಂದು ನಾಟಕವನ್ನು ಬಿಟ್ಟರೆ, ದಾರಾಶಿಕೋವಾ/ಶುಕೋವ/ಶುಕೋಹ್ ಕುರಿತು ಕನ್ನಡದಲ್ಲಿ ಯಾವುದೇ ಸಾಹಿತ್ಯಕೃತಿ ಪ್ರಕಟವಾಗಿಲ್ಲದ ಹಿನ್ನೆಲೆಯಲ್ಲಿ ಮಿತ್ರ ಉದಯಕುಮಾರ್ ಹಬ್ಬುರವರ ’ದಾರಾಶುಕೋಹ್ ನ ಕನಸುಗಳು’ ಎಂಬ ಕಾದಂಬರಿ ಹಲವು ಅರ್ಥಗಳಿಂದ ಸಾಹಸದ ಪ್ರಯತ್ನ. ಪರ್ಶಿಯನ್ ಭಾಷೆಯಲ್ಲಿರುವ ದಾರಾ ಶಿಕೋವನ ಹೆಸರನ್ನು ಹೇಗೆ ಉಚ್ಚರಿಸಬೇಕು ಎಂಬಕುರಿತು ಕೂಡಾ ಹಬ್ಬುರವರು ಬಹಳ ಸಂಶೋಧನೆ ನಡೆಸಿ ’ಶುಕೋಹ್’ ಎಂದು ಬಳಸಿದ್ದಾರೆ.
ಈ ದಾರಾ ಶುಕೋಹ್ ಮೊಗಲ್ ಚಕ್ರವರ್ತಿ ಶಹಜಹಾನನ ಹಿರಿಯ ಪುತ್ರ. ಸಾಹಿತ್ಯ, ಸಂಗೀತ ಮತ್ತು ಆಧ್ಯಾತ್ಮದಲ್ಲಿ ವಿಶೇಷ ಆಸಕ್ತ. ಇಸ್ಲಾಂ ನ ಸೂಫಿ ಆದರ್ಶಗಳನ್ನು ಹಿಂದುತ್ವದ ವೇದಾಂತ ಫಿಲಾಸಫಿಯೊಂದಿಗೆ ಸಮರಸಗೊಳಿಸಲು ಯತ್ನಿಸಿದ ಆದರ್ಶ ಜೀವಿ. ಮಜ್ಮಾ-ಉಲ್-ಬಹ್ರೇನ್ (ಎರಡು ಸಮುದ್ರಗಳ ಸಂಗಮ) ಅವನು ರಚಿಸಿದ ಕೃತಿ. ಆತ ವಿದ್ವಾಂಸರ ನೆರವಿನಿಂದ ಐವತ್ತೆರಡು ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿ ’ಸಿರ್-ಯು-ಅಕಬರ್’ (ದೊಡ್ಡರಹಸ್ಯ) ಎಂಬ ಬೃಹತ್ ಗ್ರಂಥರಚನೆಗೆ ಕಾರಣನಾದ.
ಈ ಕಾದಂಬರಿಯ ಪ್ರವೇಶಕ್ಕೆ ಅನುಕೂಲವಾಗುವಂತಹ ಮುನ್ನುಡಿಯನ್ನು ಬರೆದಿರುವ ಆರ್. ವಿಜಯರಾಘವನ್ “ದಾರಾಶಿಕೋನನ್ನು ಔರಂಗಜೇಬ ಕೊಂದದ್ದು ಮಾನಸಿಕವಾಗಿ ಅವನು ತನ್ನ ತಂದೆಯ ಬಗ್ಗೆ ಹೊಂದಿದ್ದ ಸಿಟ್ಟಿಗಾಗಿ ಎಂದು ಇತಿಹಾಸವನ್ನು ಓದುವಾಗ ನಮಗೆ ಅನ್ನಿಸುವುದುಂಟು” ಎಂದು ಹೇಳಿ ಇಲ್ಲಿನ ರಕ್ತಚರಿತ್ರೆಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಸಾಧ್ಯತೆಯನ್ನು ನಮ್ಮ ಮುಂದಿಡುತ್ತಾರೆ.
–
