ದಿ ಅಂಟೋಲ್ಡ್ ಸ್ಟೋರಿ ಆಫ್ ಕಶ್ಮೀರ್ / The Untold Story of Kashmir

Author: Santhoshkumar Mehandale

Pages:204

Edition: 2022

Book Size: 1/8th Demmy

Binding: Paper Back

Publisher:  Sahitya Loka Publication

 

Original price was: ₹230.Current price is: ₹207.

In stock

Description

ದಿ ಅಂಟೋಲ್ಡ್ ಸ್ಟೋರಿ ಆಫ್ ಕಶ್ಮೀರ್ / The Untold Story of Kashmeer – ದಿ ಅನ್ ಟೋಲ್ಡ್ ಸ್ಟೋರಿ ಆಫ್ ಕಶ್ಮೀರ್ ಕೃತಿ ಈ ತನಕ ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಯಲು ಮಾಡಿದೆ. ಕಶ್ಮೀರ ಭಾರತದ ಪಾಲಿಗೆ ಸ್ವರ್ಗ ಸದೃಶ ನಾಡಾಗಬೇಕಿತ್ತು. ದುರದೃಷ್ಟವಶಾತ್ ಅದು ಶಾಪಗ್ರಸ್ಥ ಭೂಮಿಯಾಗಿ ಪರಿಣಮಿಸಿದೆ. ಆಯಾ ಕಾಲದಲ್ಲಿ ಕಶ್ಮೀರ ವಿಷಯದಲ್ಲಿ ತೆಗೆದುಕೊಂಡ ಅವಿವೇಕದ ನಿರ್ಧಾರಗಳಿಂದ, ಇಂದಿಗೂ ನಾವು ಬೆಲೆ ತೆರುತ್ತಲೇ ಇದ್ದೇವೆ. ಭಾರತದಲ್ಲೇ ಹಿಂದೂಗಳು ಪರಕೀಯರಂತೆ, ಎರಡನೇ ದರ್ಜೆ ಪ್ರಜೆಗಳಂತೆ, ಅಸಹನೀಯವಾದ ಮತ್ತು ದುಸ್ತರ ಬದುಕನ್ನು ಬಾಳುತ್ತಿರುವುದು ದುರಂತ. ಈ ಎಲ್ಲಾ ವಿಷಯಗಳನ್ನು ಮೆಹೆಂದಳೆ ಅವರು ಈ ಕೃತಿಯಲ್ಲಿ ಐತಿಹಾಸಿಕ ಹಿನ್ನೆಲೆಯಿಂದ, ವಿಶ್ಲೇಷಣಾತ್ಮಕ ನೋಟದಿಂದ, ಚಿಕಿತ್ಸಕ ಬುದ್ಧಿಯಿಂದ ಪರಿಣಾಮಕಾರಿಯಾಗಿ ನಮ್ಮ ಮುಂದೆ ಇಟ್ಟಿದ್ದಾರೆ. ಯಾರಿಗೂ ಗೊತ್ತಾಗದೇ, ಅಲ್ಲಲ್ಲಿಯೇ ಹುದುಗಿಹೋದ, ಕಾಲಗರ್ಭ ಸೇರಬಹುದಾದ ಅನೇಕ ಭಯಾನಕ, ಐತಿಹಾಸಿಕ ‘ಕಳೇಬರ’ಗಳನ್ನು ಅವರು ಬಹಿರಂಗಗೊಳಿಸಿದ್ದಾರೆ.