ದೀಪ ಸಾಲಿನ ನಡುವೆ / Deepa Salina Naduve
Author: K.S. Narasimhaswamy
Pages: 88
Edition: 2014
Book Size: 1/8th Demmy
Binding: Paper Back
Publisher: Abhinava Publications
Description
ದೀಪ ಸಾಲಿನ ನಡುವೆ / Deepa Salina Naduve – ಪ್ರೇಮ ಕವಿ ಎಂದೇ ಪ್ರಸಿದ್ದರಾದ ಕೆ.ಎಸ್. ನರಸಿಂಹಸ್ವಾಮಿ ಅವರ ಕವನ ಸಂಕಲನ ’ದೀಪ ಸಾಲಿನ ನಡುವೆ’. ವಿಮರ್ಶಕ ಡಿ. ಆರ್ ನಾಗರಾಜ್ ಅವರು ಕೆ.ಎಸ್. ನ ಕವಿತೆಗಳ ಬಗ್ಗೆ ಹೇಳುತ್ತಾ ’ಸಂಸಾರವೆನ್ನುವುದು ಕೆ.ಎಸ್. ನರಸಿಂಹಸ್ವಾಮಿಯವರ ಕಾವ್ಯದ ಕೇಂದ್ರ ರೂಪಕ’ ಎಂದಿದ್ದಾರೆ. ಕವಿ ಮೈಸೂರು ಮಲ್ಲಿಗೆಯಲ್ಲಿ ಕಂಡ ಪ್ರೀತಿಯ ಹೆಣ್ಣಿಗೆ ಇತ್ತೀಚೆಗೆ ಬರೆದ ಕವಿತೆಗಳೂ ಈ ’ದೀಪ ಸಾಲಿನ ನಡುವೆ’ ಸಂಗ್ರಹದಲ್ಲಿ ಕಾಣಬಹುದು. ಲೋಕ ಚೆನ್ನಾಗಿರಲಿ, ಬಡವರಿಗೆ ಅನ್ನ ಸಿಗಲಿ, ಯುದ್ದಗಳಿಲ್ಲದೆ ಇರಲಿ, ಎನ್ನುವ ಅವರ ಧೋರಣೆ ಅವರ ಕಾವ್ಯದ ವಸ್ತುಗಳಾಗಿವೆ. ಬದುಕಿನಲ್ಲಿರುವ ಚೆಲುವು ಮಾಸದೆ ಇರಲಿ ಎನ್ನುವ ಅವರ ಜೀವನಪ್ರೀತಿ ಅವರ ಕಾವ್ಯದಲ್ಲೂ ಧ್ವನಿಸುತ್ತದೆ. ಮತ್ತಷ್ಟು ಕವಿತೆಗಳಲ್ಲಿ ಮನುಷ್ಯನನ್ನು ಕಾಡುವ ದೇವರು, ಸಾವು, ನೋವು, ಬದುಕಿನ ಅರ್ಥ, ಬಡತನ ಇವೆಲ್ಲವೂ ನರಸಿಂಹಸ್ವಾಮಿಯವರನ್ನು ಕಾಡಿದ ಪರಿ ಅವರ ಇಲ್ಲಿನ ಕವಿತೆಗಳಲ್ಲಿ ಮನಗಾಣಬಹುದು.
