ಜಡಿಮಳೆಯ  ರಾತ್ರಿ / Jadimaleya Ratri
ಜಡಿಮಳೆಯ ರಾತ್ರಿ / Jadimaleya Ratri Original price was: ₹120.Current price is: ₹108.
Back to products

ದೇವರೇ ನಿನ್ನ ಕುಲ ಯಾವುದು / Devare Ninna Kula Yavudu

Author: Sri Yandamoori Veerendranath

Pages:168

Edition: 2002

Book Size: 1/8th Demmy

Binding: Paper Back

Publisher: Chendur Prakashana

Original price was: ₹75.Current price is: ₹68.

In stock

Description

ದೇವರೇ ನಿನ್ನ ಕುಲ ಯಾವುದು / Devare Ninna Kula Yavudu –

ಹೈಸ್ಕೂಲು ಓದುವಾಗ ಮಂಗಳ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ಯಂಡಮೂರಿಯವರ ಕಾದಂಬರಿಗಳನ್ನು ಓದಿದ್ದು ಬಿಟ್ಟು ಇತ್ತೀಚೆಗೆ ಅವರು ಯಾವುದೇ ಕಾದಂಬರಿಗಳನ್ನು ಓದಿರಲಿಲ್ಲ. ಆಗ ಯಾವ ಕಾದಂಬರಿಗಳನ್ನು ಓದಿದ್ದೇನೆ ಎನ್ನುವುದರ ನೆನಪು ಕೂಡ ಉಳಿದಿಲ್ಲ. ತೀರಾ ಅಚಾನಕ್ಕಾಗಿ ಈ ಕಾದಂಬರಿ ನನಗೆ ದೊರಕಿತು. ಯಂಡಮೂರಿ ಅವರು ಕಥಾವಸ್ತುವಿನ ಆಳ ಅಗಲಗಳನ್ನು ಬಹಳ ಚೆನ್ನಾಗಿ ಮನದಟ್ಟು ಮಾಡಿಕೊಂಡು ನಂತರವೇ ಕೃತಿಯನ್ನು ರಚಿಸಿದ್ದಾರೆ ಎಂದೆನಿಸಿತು. ಸಾಮಾನ್ಯವಾಗಿ ಅಪರಿಚಿತವಾದ ಅಥವಾ ಹೆಚ್ಚು ಪ್ರಚಲಿತದಲ್ಲಿಲ್ಲದ ಜವುಳಿ ಉದ್ಯಮದ ಮೇಲೆ ಈ ಕೃತಿ ಬೆಳಕು ಚೆಲ್ಲಿದೆ.

ತಲೆಯ ಮೇಲೆ ಸೀರೆಗಳ ಮೂಟೆಯನ್ನು ಹೊತ್ತುಕೊಂಡು ಊರೂರು ಅಲೆದು ಮಾರುತ್ತಾ ಜೀವನವನ್ನು ಸಾಗಿಸುತ್ತಿದ್ದ ಹುಡುಗ ಟೆಕ್ಸ್ಟೈಲ್ ಉದ್ಯಮದ ಅಧಿಪತಿಯಾಗುವ ಪಯಣದಲ್ಲಿ ಕಂಡು ಏಳು ಬೀಳುಗಳ ಕಥೆಯೇ ಇಲ್ಲಿಯ ಕಥಾವಸ್ತು. ಇದನ್ನು ಕಾರ್ಪೋರೇಟ್ ಜಗತ್ತಿನಲ್ಲಿ ಒಬ್ಬರನ್ನೊಬ್ಬರು ನಡೆಯುವ ಹಣಿಯುವ ಮೇಲೇರುವ ಹಾವು ಏಣಿ ಆಟ ಎಂದು ಗುರುತಿಸಬಹುದು. ರವಿತೇಜ ಟೆಕ್ಸ್ಟೈಲ್ ಮತ್ತು ಚೆಂಚುರಾಮಯ್ಯ ಕಂಪನಿಗಳು ತಮ್ಮ ಅಧಿಪತ್ಯವನ್ನು ಸಾಧಿಸಲು ಬಳಸುವ ತಂತ್ರಗಳು, ಗ್ರಾಹಕರನ್ನು ಸೆಳೆಯಲು ಯತ್ನಿಸಿರುವ ಆಮಿಷಗಳು, ಸೀರೆಗಳ ವಿನ್ಯಾಸಗಳು ಮೂಲಕ ಹೆಂಗೆಳೆಯರ ಮನವನ್ನು ಸೂರೆಗೊಳ್ಳಲು ನಡೆಸುವ ಪ್ರಯತ್ನಗಳು ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಸೀರೆಗಳು ಭಾರತದ ಮಾರುಕಟ್ಟೆಯಲ್ಲಿ ಪಡೆದಿರುವ ವಿಶಿಷ್ಟ ಸ್ಥಾನ, ಅಸಂಖ್ಯಾತ ಬಗೆಯ ಸೀರೆಗಳು, ವಿನ್ಯಾಸದಿಂದ, ಪ್ರಾಂತ್ಯವಾರು ವಿಶೇಷತೆಗಳಿಂದ ಸೀರೆಗಳು ಪಡೆಯುವ ಪ್ರಸಿದ್ಧಿ ಒಟ್ಟಿನಲ್ಲಿ ಸೀರೆಗಳ ಹೊಸ ಪ್ರಪಂಚವನ್ನೇ ನೋಡಿದ ಹಾಗಾಯಿತು.