ದ್ಯಾವನೂರು ಹಾಗೂ ಒಡಲಾಳ / Dyavanooru Haagu Odalaala
Author: Devanura Mahadeva
Pages:108
Edition: 2025
Book Size: 1/8th Demmy
Binding: Paper Back
Publisher: Pustaka Prakashana
Specification
Description
ದ್ಯಾವನೂರು ಹಾಗೂ ಒಡಲಾಳ / Dyavanooru Haagu Odalaala – ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ ‘ಒಡಲಾಳ’ ಎಂಬೊಂದು ಕಥೆ ಬರೆದರು. ಓದಿದವರಿಗೆ ಗುಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು, ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟ್ಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತನೆಗಳನ್ನು ಹುಟ್ಟುಹಾಕಬಲ್ಲವು. ಕೃತಿಯನ್ನು ಅರಿಯಲು ಲೋಕದ ಮಾನದಂಡಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ.
